Daniel 7:24 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹತ್ತು ಕೊಂಬುಗಳು ಈ ನಾಲ್ಕನೆಯ ರಾಜ್ಯದ ಹತ್ತು ಜನ ಅರಸರನ್ನು ಸೂಚಿಸುತ್ತವೆ. ಆ ಹತ್ತು ಜನ ಅರಸರ ತರುವಾಯ ಮತ್ತೊಬ್ಬ ಅರಸನು ಬರುವನು. ಅವನು ತನಗಿಂತಲೂ ಮುಂಚೆ ರಾಜ್ಯಭಾರ ಮಾಡಿದ ಅರಸರಿಗಿಂತ ಭಿನ್ನನಾಗಿರುವನು. ಅವನು ಬೇರೆ ಅರಸರುಗಳಲ್ಲಿ ಮೂವರನ್ನು ಸೋಲಿಸುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಹತ್ತು ಕೊಂಬುಗಳ ವಿಷಯವೇನೆಂದರೆ ಆ ರಾಜ್ಯದಲ್ಲಿ ಹತ್ತು ಮಂದಿ ಅರಸರು ಉಂಟಾಗುವರು, ಅವರ ತರುವಾಯ ಮತ್ತೊಬ್ಬನು ತಲೆದೋರುವನು. ಅವನು ಮೊದಲಿನ ಅರಸರಿಗಿಂತ ವಿಲಕ್ಷಣನಾಗಿ ಮೂವರು ಅರಸರನ್ನು ಸದೆಬಡೆಯುವನು.
Kannada BSI Bible 2016
ಆ ಹತ್ತು ಕೊಂಬು ಗಳು ಆ ರಾಜ್ಯದೊಳಗೆ ಹುಟ್ಟುವ ಹತ್ತು ಅರಸುಗಳಾ ಗಿವೆ; ಅನಂತರ ಇನ್ನೊಬ್ಬನು ಹುಟ್ಟುವನು ಅವನು ಮೊದಲಿನವರಿಗಿಂತ ವಿಲಕ್ಷಣವಾಗಿ ಮೂರು ಅರಸರನ್ನು ಅದುಮಿ ಬಿಡುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಹತ್ತು ಕೊಂಬುಗಳ ವಿಷಯವೇನಂದರೆ ಆ ರಾಜ್ಯದಲ್ಲಿ ಹತ್ತುಮಂದಿ ಅರಸರು ಉಂಟಾಗುವರು; ಅವರ ತರುವಾಯ ಮತ್ತೊಬ್ಬನು ತಲೆದೋರುವನು; ಅವನು ಮುಂಚಿನ ಅರಸರಿಗಿಂತ ವಿಲಕ್ಷಣನಾಗಿ ಮೂವರು ಅರಸರನ್ನು ಅದುವಿುಬಿಡುವನು.
Kannada Bible (KNCL) BSI 2016
ಆ ಹತ್ತು ಕೊಂಬುಗಳು ಅದೇ ರಾಜ್ಯವನ್ನು ಆಳುವ ಹತ್ತುಮಂದಿ ಅರಸರು. ಅವರ ತರುವಾಯ ಮತ್ತೊಬ್ಬನು ತಲೆದೋರುವನು. ಅವನು ಮುಂಚಿನ ಅರಸರಿಗಿಂತ ವಿಲಕ್ಷಣವಾಗಿರುವನು, ಆ ಮೂವರು ಅರಸರನ್ನು ಸದೆಬಡಿದುಬಿಡುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಹತ್ತು ಕೊಂಬುಗಳು ಆ ರಾಜ್ಯದೊಳಗೆ ಹುಟ್ಟುವ ಹತ್ತು ಅರಸರು. ಅನಂತರ ಇನ್ನೊಬ್ಬ ಅರಸನು ಹುಟ್ಟುವನು. ಅವನು ಮೊದಲಿನವರಿಗಿಂತ ವಿಲಕ್ಷಣವಾಗಿ ಮೂರು ಅರಸರನ್ನು ಅದುಮಿ ಬಿಡುವನು.