Daniel 8:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದಾನಿಯೇಲನೆಂಬ ನಾನು ಈ ದರ್ಶನವನ್ನು ಕಂಡೆ ಮತ್ತು ಅದರ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ನಾನು ಈ ದರ್ಶನದ ಬಗ್ಗೆ ವಿಚಾರ ಮಾಡುತ್ತಿದ್ದಾಗ ಮನುಷ್ಯನಂತಿದ್ದವನೊಬ್ಬನು ನನ್ನ ಎದುರಿಗೆ ನಿಂತಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಾನಿಯೇಲನಾದ ನಾನು ಈ ಕನಸನ್ನು ಕಂಡು ಅದನ್ನು ಗ್ರಹಿಸಲು ಪ್ರಯತ್ನಿಸುತ್ತಿರುವಾಗ ಇಗೋ, ಮನುಷ್ಯ ಸದೃಶನೊಬ್ಬನು ನನ್ನೆದುರಿಗೆ ನಿಂತಿದ್ದನು.
Kannada BSI Bible 2016
ನಾನು, ಹೌದು, ದಾನಿಯೇಲನೆಂಬ ನಾನು ಆ ದರ್ಶನವನ್ನು ನೋಡಿ ಅದರ ಅರ್ಥವನ್ನು ಶೋಧಿಸಿ ದಾಗ, ಇಗೋ, ಮನುಷ್ಯನ ರೂಪದಂತೆ ಇದ್ದದ್ದು ನನ್ನ ಮುಂದೆ ನಿಂತಿತು;
Kannada BSI JV (ಕನ್ನಡ ಸತ್ಯವೇದವು J.V. (BSI))
ದಾನಿಯೇಲನಾದ ನಾನು ಕನಸನ್ನು ಕಂಡು ಅದನ್ನು ಗ್ರಹಿಸಲು ಪ್ರಯತ್ನಿಸುತ್ತಿರುವಾಗ ಇಗೋ, ಮನುಷ್ಯಸದೃಶನೊಬ್ಬನು ನನ್ನೆದುರಿಗೆ ನಿಂತಿದ್ದನು.
Kannada Bible (KNCL) BSI 2016
ದಾನಿಯೇಲನಾದ ನಾನು ಈ ಕನಸನ್ನು ಕಂಡು ಅದನ್ನು ಗ್ರಹಿಸಲು ಪ್ರಯತ್ನಿಸುತ್ತಿರುವಾಗ ತಟ್ಟನೆ ಮನುಷ್ಯ ರೂಪಹೊಂದಿದ ಒಬ್ಬನು ನನ್ನೆದುರಿಗೆ ನಿಂತನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಾನಿಯೇಲನೆಂಬ ನಾನು ಆ ದರ್ಶನವನ್ನು ನೋಡಿ, ಅದರ ಅರ್ಥವನ್ನು ಗ್ರಹಿಸಲು ಪ್ರಯತ್ನಿಸುತ್ತಿರುವಾಗ, ಮನುಷ್ಯನ ರೂಪದಂತಿರುವ ಒಬ್ಬನು ನನ್ನ ಮುಂದೆ ನಿಂತಿದ್ದನು.