Daniel 8:26 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಆಗಿನ ಕಾಲದ ಮತ್ತು ಪರಿಸ್ಥಿತಿಯ ಬಗ್ಗೆ ಕಂಡ ದರ್ಶನಗಳು ನಿಜವಾಗುವವು. ಈ ದರ್ಶನ ಗುಟ್ಟಾಗಿರಲಿ. ಅದೆಲ್ಲ ನಡೆಯಬೇಕಾದರೆ ಇನ್ನೂ ಬಹಳ ಕಾಲಬೇಕು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕನಸಿನಲ್ಲಿ ತಿಳಿಸಲ್ಪಟ್ಟ ಉದಯಾಸ್ತಮಾನಗಳ ವಿಷಯವು ನಿಜವೇ ಸರಿ. ಆದರೆ ಆ ಕನಸು ಗುಟ್ಟಾಗಿರಲಿ. ಅದು ಬಹು ದಿನಗಳ ನಂತರ ನಡೆಯುವಂಥದು” ಎಂದು ಹೇಳಿದನು.
Kannada BSI Bible 2016
ದರ್ಶನದಲ್ಲಿ ಹೇಳಿದ ಆ ಉದಯಾಸ್ತಮಾನ ಗಳ ವಿಷಯವು ಸತ್ಯವೇ; ಆದಕಾರಣ ಆ ದರ್ಶನವನ್ನು ನೀನು ಮುಚ್ಚಿಡು, ಅದು ಬಹಳ ದಿವಸಗಳ ವರೆಗೆ ಇರುವದು.ದಾನಿಯೇಲನಾದ ನಾನು ಮೂರ್ಛೆ ಹೋಗಿ ಕೆಲವು ದಿನಗಳ ವರೆಗೂ ಅಸ್ವಸ್ಥನಾದೆನು; ಅನಂತರ ನಾನು ಎದ್ದು ಅರಸನ ಕೆಲಸ ಕಾರ್ಯಗಳನ್ನು ಮಾಡಿದೆನು; ನಾನು ಆ ದರ್ಶನದ ವಿಷಯ ಆಶ್ಚರ್ಯ ಪಟ್ಟೆನು, ಆದರೆ ಅದನ್ನು ಅರ್ಥಮಾಡಿಕೊಂಡವರು ಯಾರೂ ಇಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಕನಸಿನಲ್ಲಿ ತಿಳಿಸಲ್ಪಟ್ಟ ಉದಯಾಸ್ತಮಾನಗಳ ವಿಷಯವು ನಿಜವೇ ಸರಿ; ಆದರೆ ಆ ಕನಸು ಗುಟ್ಟಾಗಿರಲಿ; ಅದು ಬಹು ದೂರದ ಕಾಲದ್ದು ಎಂದು ಹೇಳಿದನು.
Kannada Bible (KNCL) BSI 2016
ಕನಸಿನಲ್ಲಿ ತಿಳಿಸಲಾದ ಉದಯಾಸ್ತಮಾನಗಳ ವಿಷಯ ನಿಜವೇ ಸರಿ. ಆದರೆ ಆ ಕನಸು ಗುಟ್ಟಾಗಿರಲಿ. ಅದು ಬಹುದೂರದ ಕಾಲದ್ದು,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನಿಮಗೆ ನೀಡಲಾದ ಸಂಜೆ ಮತ್ತು ಮುಂಜಾನೆಗಳ ದರ್ಶನವು ಸತ್ಯವಾದದ್ದು. ಆದರೆ ಆ ದರ್ಶನವು ಗುಟ್ಟಾಗಿರಲಿ. ಏಕೆಂದರೆ ಅದು ಬಹು ದೂರದ ಭವಿಷ್ಯಕ್ಕೆ ಸಂಬಂಧಿಸಿದ್ದು.”