Daniel 9:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ದಾನಿಯೇಲನೇ, ಇದನ್ನು ತಿಳಿದುಕೊ. ಇದನ್ನು ಚೆನ್ನಾಗಿ ಅರ್ಥಮಾಡಿಕೊ. ‘ಹೋಗಿ ಜೆರುಸಲೇಮನ್ನು ಸರಿಪಡಿಸಿರಿ’ ಎಂಬ ದೈವೋಕ್ತಿಯು ಹೊರಡುವಂದಿನಿಂದ ಅಭಿಷಿಕ್ತನಾದ ರಾಜನು ಬರುವದರೊಳಗೆ ಏಳು ವಾರಗಳು ಕಳೆಯಬೇಕು. ಆಗ ಜೆರುಸಲೇಮು ಮತ್ತೆ ನಿರ್ಮಾಣವಾಗುವುದು. ಜನರು ಒಂದಾಗಿ ಸೇರುವದಕ್ಕೆ ಜೆರುಸಲೇಮಿನಲ್ಲಿ ಮತ್ತೆ ಸ್ಥಳಾವಕಾಶವಾಗುವುದು. ನಗರದ ಸುತ್ತಲೂ ಅದನ್ನು ರಕ್ಷಿಸುವುದಕ್ಕಾಗಿ ಒಂದು ಕಂದಕವನ್ನು ಕೊರೆಯಲಾಗುವುದು. ಅರವತ್ತೆರಡು ವಾರಗಳವರೆಗೆ ಜೆರುಸಲೇಮ್ ನಗರವನ್ನು ಕಟ್ಟಲಾಗುವುದು. ಆದರೆ ಆ ಅವಧಿಯಲ್ಲಿ ಹಲವಾರು ಕಷ್ಟನಷ್ಟಗಳು ಸಂಭವಿಸುವವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದನ್ನು ತಿಳಿದು ಮನದಟ್ಟುಮಾಡಿಕೋ; ಯೆರೂಸಲೇಮ್ ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹರಡುವ ದಿನದಿಂದ ಅಭಿಷಿಕ್ತನಾದ ಪ್ರಭುವು ಬರುವುದರೊಳಗೆ ಏಳು ವಾರಗಳು ಕಳೆಯಬೇಕು! ಅದು ಪುನಃ ಕಟ್ಟಲ್ಪಟ್ಟು ಅರವತ್ತೆರಡು ವಾರ ಇರುವುದು; ಅದಕ್ಕೆ ಚೌಕವೂ ಕಂದಕವೂ ಇರುವವು; ಆ ಕಾಲವು ಬಹು ಕಷ್ಟಕಾಲ.
Kannada BSI Bible 2016
ಆದದರಿಂದ ನೀನು ತಿಳಿಯಬೇಕಾದದ್ದು ಏನಂದರೆ --ಯೆರೂಸಲೇಮನ್ನು ತಿರಿಗಿ ಸ್ಥಾಪಿಸಿ ಕಟ್ಟಲು ಆಜ್ಞೆ ಹೊರಡುವದು ಮೊದಲುಗೊಂಡು ಅಭಿಷಿಕ್ತನಾದ (ಮೆಸ್ಸೀಯನ) ಪ್ರಭುವಿನ ವರೆಗೂ ಏಳು ವಾರಗಳು ಕಳೆಯಬೇಕು. ಅದು ಪುನಃ ಸ್ಥಾಪಿಸಲ್ಪಟ್ಟು ಅರವತ್ತೆರಡು ವಾರಗಳು ಇರುವದು. ಅದಕ್ಕೆ ಬೀದಿಯೂ ಗೋಡೆ ಗಳೂ ಕಷ್ಟಕಾಲದಲ್ಲಿ ಕಟ್ಟಲ್ಪಡುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದನ್ನು ತಿಳಿದು ಮಂದಟ್ಟುಮಾಡಿಕೋ; ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ ಅಭಿಷಿಕ್ತನಾದ ಪ್ರಭುವು ಬರುವದರೊಳಗೆ ಏಳು ವಾರಗಳು ಕಳೆಯಬೇಕು! ಅದು ಪುನಃ ಕಟ್ಟಲ್ಪಟ್ಟು ಅರುವತ್ತೆರಡು ವಾರ ಇರುವದು; ಅದಕ್ಕೆ ಚೌಕವೂ ಕಂದಕವೂ ಇರುವವು; ಆ ಕಾಲವು ಬಹು ಕಷ್ಟಕಾಲ.
Kannada Bible (KNCL) BSI 2016
ಇದನ್ನು ತಿಳಿದು ಮನದಟ್ಟು ಮಾಡಿಕೊ, ‘ಹಿಂದಿರುಗಿ ಜೆರುಸಲೇಮನ್ನು ಪುನರ್‍ ನಿರ್ಮಿಸಿ’ ಎಂಬ ದೈವೋಕ್ತಿ ಹೊರಡುವಂದಿನಿಂದ ಪ್ರಭುವಾಗಿ ಅಭಿಷಿಕ್ತನಾದವನು ಬರುವುದರೊಳಗೆ ಏಳು ಸಾರಿ ಏಳು ವರ್ಷಗಳು ಕಳೆಯಬೇಕು. ಅದು ಪುನಃ ಬೀದಿ ಚೌಕಗಳಿಂದಲೂ ಕೋಟೆಕೊತ್ತಲುಗಳಿಂದಲೂ ಕಟ್ಟಲ್ಪಟ್ಟು ಏಳು ಸಾರಿ ಅರವತ್ತೆರಡು ವರ್ಷಗಳು ಇರುವುದು. ಆ ಕಾಲವು ಬಹು ಕಷ್ಟಕರವಾದ ಕಾಲವಾಗಿರುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಆದ್ದರಿಂದ ನೀನು ಅರಿತು ತಿಳಿಯಬೇಕಾದದ್ದು ಏನೆಂದರೆ, ಯೆರೂಸಲೇಮನ್ನು ತಿರುಗಿ ಕಟ್ಟಲು ಆಜ್ಞೆ ಹೊರಡುವ ದಿನದಿಂದ, ಆಳುವ ಒಬ್ಬ ಅಭಿಷಿಕ್ತರು ಬರುವುದರೊಳಗೆ ಏಳು ವಾರಗಳು ಕಳೆಯಬೇಕು! ಅದು ಪುನಃ ಕಟ್ಟಿದ ಮೇಲೆ, ಅರವತ್ತೆರಡು ವಾರಗಳು ಇರುವುದು. ಕಷ್ಟಕಾಲದಲ್ಲಿ ಬೀದಿ ಚೌಕಗಳಿಂದಲೂ ಕೋಟೆಕೊತ್ತಲುಗಳಿಂದಲೂ ಅದು ಕಟ್ಟಲಾಗುವುದು.