Deuteronomy 1:42 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಆದರೆ ಯೆಹೋವನು ನನಗೆ ಹೇಳಿದ್ದೇನೆಂದರೆ: ‘ಆ ಜನರಿಗೆ ಬೆಟ್ಟವನ್ನೇರಿ ಯುದ್ಧಮಾಡಬಾರದೆಂದು ಹೇಳು. ಯಾಕೆಂದರೆ ನಾನು ಅವರೊಂದಿಗಿರುವುದಿಲ್ಲ ಮತ್ತು ಅವರ ವೈರಿಗಳು ಅವರನ್ನು ಸೋಲಿಸಿಬಿಡುವರು!’
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಯೆಹೋವನು ನನಗೆ, “ನಾನು ಇವರ ಮಧ್ಯದಲ್ಲಿ ಇರುವುದಿಲ್ಲವಾದುದರಿಂದ ಇವರು ಸೋತುಹೋಗುವರು. ಇವರು ಯುದ್ಧಮಾಡಲೂ ಬಾರದು, ಆ ಬೆಟ್ಟದ ಸೀಮೆಗೆ ಹೋಗಲೂ ಬಾರದು ಎಂದು ಇವರಿಗೆ ಆಜ್ಞಾಪಿಸು” ಎಂದು ಹೇಳಿದನು.
Kannada BSI Bible 2016
ಆದರೆ ಕರ್ತನು ನನಗೆ--ಹೋಗಬೇಡಿರಿ; ಯುದ್ಧಮಾಡ ಬೇಡಿರಿ; ಯಾಕಂದರೆ ನಾನು ನಿಮ್ಮ ಮಧ್ಯದಲ್ಲಿ ಇರುವದಿಲ್ಲ; ನೀವು ನಿಮ್ಮ ಶತ್ರುಗಳಿಂದ ಹೊಡೆಯ ಲ್ಪಡುವಿರಿ ಎಂದು ಅವರಿಗೆ ಹೇಳು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಯೆಹೋವನು ನನಗೆ - ನಾನು ಇವರ ಮಧ್ಯದಲ್ಲಿ ಇಲ್ಲವಾದದರಿಂದ ಇವರು ಸೋತು ಹೋಗುವರು; ಯುದ್ಧಮಾಡಲೂಬಾರದು, ಆ ಬೆಟ್ಟದ ಸೀಮೆಗೆ ಹೋಗಲೂಬಾರದು ಎಂದು ಇವರಿಗೆ ಆಜ್ಞಾಪಿಸು ಅಂದನು.
Kannada Bible (KNCL) BSI 2016
ಆದರೆ ಸರ್ವೇಶ್ವರ ನನಗೆ, ‘ನಾನು ಇವರ ಮಧ್ಯೆ ಇಲ್ಲವಾದುದರಿಂದ ಇವರು ಸೋತುಹೋಗುವರು; ಯುದ್ಧಮಾಡಲೂಬಾರದು, ಆ ಮಲೆನಾಡಿಗೆ ಹೋಗಲೂಬಾರದು ಎಂದು ಇವರಿಗೆ ಆಜ್ಞಾಪಿಸು,’ ಎಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಯೆಹೋವ ದೇವರು ನನಗೆ, “ ‘ಏರಿ ಹೋಗಬೇಡಿರಿ, ಯುದ್ಧಮಾಡಬೇಡಿರಿ. ಏಕೆಂದರೆ ನಾನು ನಿಮ್ಮ ಮಧ್ಯದಲ್ಲಿ ಇಲ್ಲ. ನೀವು ನಿಮ್ಮ ಶತ್ರುಗಳಿಂದ ಸೋಲನ್ನು ಅನುಭವಿಸುವಿರಿ,’ ಎಂದು ಅವರಿಗೆ ಹೇಳು,” ಎಂದರು.