Deuteronomy 10:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಯೆಹೋವನು ಮುಂಚಿನಂತೆಯೇ ಇದರಲ್ಲೂ ದಶಾಜ್ಞೆಗಳನ್ನು ಬರೆದು ನನಗೆ ಕೊಟ್ಟನು. ನೀವು ಬೆಟ್ಟದ ಬಳಿ ಒಟ್ಟಾಗಿ ಸೇರಿ ಬಂದಿದ್ದಾಗ ಆತನು ಬೆಂಕಿಯೊಳಗಿಂದ ಹೇಳಿದ್ದ ದಶಾಜ್ಞೆಗಳೇ ಇವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಬೆಟ್ಟದ ಮೇಲೆ ಅಗ್ನಿಜ್ವಾಲೆಯೊಳಗಿಂದ ನೀವು ಸಭೆ ಕೂಡಿದ ದಿನದಲ್ಲಿ ನಿಮ್ಮ ಸಂಗಡ ಹೇಳಿದ ಮಾತುಗಳನ್ನು, ಅಂದರೆ ಆ ಹತ್ತು ಕಟ್ಟಳೆಗಳನ್ನು ಆತನು ಮೊದಲಿನಂತೆಯೇ ಆ ಹಲಿಗೆಗಳ ಮೇಲೆ ಬರೆದನು.
Kannada BSI Bible 2016
ಆ ಹಲಗೆಗಳ ಮೇಲೆ ಕರ್ತನು ಮುಂಚೆ ಬರೆದ ಪ್ರಕಾರ ಆತನು ನಿಮಗೆ ಬೆಟ್ಟದಲ್ಲಿ ಬೆಂಕಿಯೊಳಗಿಂದ ಸಭೆಯ ದಿವಸದಲ್ಲಿ ಹೇಳಿದ ಹತ್ತು ಆಜ್ಞೆಗಳನ್ನು ಬರೆದು ನನಗೆ ಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಬೆಟ್ಟದ ಮೇಲೆ ಅಗ್ನಿಜ್ವಾಲೆಯೊಳಗಿಂದ ನೀವು ಸಭೇಕೂಡಿದ ದಿನದಲ್ಲಿ ನಿಮ್ಮ ಸಂಗಡ ಹೇಳಿದ ಮಾತುಗಳನ್ನು ಅಂದರೆ ಆ ಹತ್ತು ಕಟ್ಟಳೆಗಳನ್ನು ಆತನು ಮೊದಲಿನಂತೆಯೇ ಆ ಹಲಿಗೆಗಳ ಮೇಲೆ ಬರೆದನು.
Kannada Bible (KNCL) BSI 2016
ಸರ್ವೇಶ್ವರ ಬೆಟ್ಟದ ಮೇಲೆ ಅಗ್ನಿಜ್ವಾಲೆಯೊಳಗಿಂದ, ನೀವು ಸಭೆಕೂಡಿದ ದಿನದಲ್ಲಿ, ನಿಮಗೆ ಹೇಳಿದ ಮಾತುಗಳನ್ನು ಅಂದರೆ, ಆ ಹತ್ತು ಆಜ್ಞೆಗಳನ್ನು ಅವರು ಮೊದಲಿನಂತೆಯೇ ಆ ಹಲಗೆಗಳ ಮೇಲೆ ಬರೆದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಹಲಗೆಗಳ ಮೇಲೆ ಯೆಹೋವ ದೇವರು ಮುಂಚೆ ಬರೆದಿದ್ದ ಪ್ರಕಾರ ಬರೆದರು. ಅವರು ನಿಮಗೆ ಬೆಟ್ಟದಲ್ಲಿ ಬೆಂಕಿಯೊಳಗಿಂದ ಸಭೆಕೂಡಿದ ದಿವಸದಲ್ಲಿ ಹೇಳಿದ ಆ ಹತ್ತು ಆಜ್ಞೆಗಳನ್ನು ಬರೆದು ನನಗೆ ಕೊಟ್ಟರು.