Deuteronomy 11:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ರೂಬೇನ್ ಕುಲದ ಎಲೀಯಾಬನ ಮಕ್ಕಳಾದ ದಾತಾನನಿಗೆ ಮತ್ತು ಅಬೀರಾಮನಿಗೆ ಯೆಹೋವನು ಮಾಡಿದ್ದನ್ನು ನೀವೇ ನೋಡಿದ್ದೀರಿ. ನಿಮ್ಮ ಕಣ್ಣಮುಂದೆಯೇ ಭೂಮಿಯು ಬಾಯಿ ತೆರೆದು ಅವರನ್ನು, ಅವರ ಹೆಂಡತಿಮಕ್ಕಳನ್ನು, ಅವರ ಗುಡಾರವನ್ನು, ಸೇವಕರನ್ನು, ಅವರ ಪಶುಗಳನ್ನು ನುಂಗಿದ್ದನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರೂಬೇನನ ಮೊಮ್ಮಕ್ಕಳೂ, ಎಲೀಯಾಬನ ಮಕ್ಕಳೂ ಆದ ದಾತಾನ್ ಮತ್ತು ಅಬೀರಾಮರು ತಿರುಗಿ ಬಿದ್ದಾಗ ಭೂಮಿಯು ಬಾಯ್ದೆರೆದು ಅವರನ್ನೂ, ಅವರ ಮನೆಯವರನ್ನೂ, ಅವರ ಡೇರೆಗಳನ್ನೂ ಮತ್ತು ಅವರಿಗೆ ಸೇರಿದ ಎಲ್ಲಾ ಪ್ರಾಣಿಗಳನ್ನೂ ಇಸ್ರಾಯೇಲರ ನಡುವೆ ನುಂಗಿಬಿಟ್ಟದ್ದನ್ನೂ ಈಗ ಜ್ಞಾಪಕಮಾಡಿಕೊಳ್ಳಿರಿ.
Kannada BSI Bible 2016
ಆತನು ರೂಬೇನನ ಮಗನಾದ ಎಲಿಯಾಬನ ಕುಮಾರರಾಗಿರುವ ದಾತಾನನಿಗೂ ಅಬೀರಾಮನಿಗೂ ಮಾಡಿದ್ದನ್ನೂ ಭೂಮಿಯು ತನ್ನ ಬಾಯನ್ನು ತೆರೆದು ಅವರ ಮನೆಗಳನ್ನೂ ಡೇರೆಗಳನ್ನೂ ಮೇರೆಗಳನ್ನೂ ಅವರಿಗಿದ್ದ ಎಲ್ಲಾ ಆಸ್ತಿಯನ್ನೂ ಸಮಸ್ತ ಇಸ್ರಾಯೇಲ್‌ ಮಧ್ಯದಲ್ಲಿ ಹೇಗೆ ನುಂಗಿತೆಂಬದನ್ನೂ ನೋಡದೆ ತಿಳಿಯದೆ ಇರುವ ನಿಮ್ಮ ಮಕ್ಕಳ ಸಂಗಡ ನಾನು ಮಾತನಾಡುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ರೂಬೇನನ ಮೊಮ್ಮಕ್ಕಳೂ ಎಲೀಯಾಬನ ಮಕ್ಕಳೂ ಆದ ದಾತಾನ್ ಅಬೀರಾಮರು [ತಿರುಗಿಬಿದ್ದಾಗ] ಭೂವಿುಯು ಬಾಯ್ದೆರೆದು ಅವರನ್ನೂ ಅವರ ಮನೆಯವರನ್ನೂ ಡೇರೆಗಳನ್ನೂ ಅವರಿಗೆ ಸೇರಿದ ಎಲ್ಲಾ ಪ್ರಾಣಿಗಳನ್ನೂ ಇಸ್ರಾಯೇಲ್ಯರ ನಡುವೆ ನುಂಗಿಬಿಟ್ಟದ್ದನ್ನೂ ಈಗ ಜ್ಞಾಪಕಮಾಡಿಕೊಳ್ಳಿರಿ. ಈ ಕಾರ್ಯಗಳನ್ನು ನೋಡದೆ ತಿಳಿಯದೆ ಇರುವ ನಿಮ್ಮ ಮಕ್ಕಳಿಗೆ ನಾನು ಈ ಮಾತನ್ನು ಹೇಳುವದಿಲ್ಲ;
Kannada Bible (KNCL) BSI 2016
ರೂಬೇನನ ಮೊಮ್ಮಕ್ಕಳೂ ಎಲೀಯಾಬನ ಮಕ್ಕಳೂ ಆದ ದಾತಾನ್ ಅಬೀರಾಮರು ದಂಗೆಯೆದ್ದಾಗ ಭೂಮಿ ಬಾಯ್ದೆರೆದು ಅವರನ್ನೂ ಅವರ ಮನೆಯವರನ್ನೂ ಡೇರೆಗಳನ್ನೂ ಅವರಿಗೆ ಸೇರಿದ ಎಲ್ಲ ಪಶುಪ್ರಾಣಿಗಳನ್ನೂ ಇಸ್ರಯೇಲರ ನಡುವೆ ನುಂಗಿಬಿಟ್ಟದ್ದನ್ನೂ ಈಗ ಜ್ಞಾಪಕಮಾಡಿಕೊಳ್ಳಿ. ಈ ಕಾರ್ಯಗಳನ್ನು ನೋಡದೆ ಹಾಗು ತಿಳಿಯದೆ ಇರುವ ನಿಮ್ಮ ಮಕ್ಕಳಿಗೆ ನಾನು ಈ ಮಾತನ್ನು ಹೇಳುತ್ತಿಲ್ಲ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ರೂಬೇನನ ಮಗ ಎಲೀಯಾಬನ ಪುತ್ರರಾಗಿರುವ ದಾತಾನ್, ಅಬೀರಾಮರು ದಂಗೆಯೆದ್ದಾಗ, ಭೂಮಿಯು ಬಾಯಿತೆರೆದು ಅವರ ಮನೆಗಳನ್ನೂ, ಅವರಿಗಿದ್ದ ಎಲ್ಲಾ ಆಸ್ತಿಯನ್ನೂ, ಮನೆಯವರನ್ನೂ ಡೇರೆಗಳನ್ನೂ ಅವರಿಗೆ ಸೇರಿದ ಎಲ್ಲಾ ಪಶುಪ್ರಾಣಿಗಳನ್ನೂ, ಸಮಸ್ತ ಇಸ್ರಾಯೇಲರ ಮಧ್ಯದಲ್ಲಿ ಹೇಗೆ ನುಂಗುವಂತೆ ದೇವರು ಮಾಡಿದರೆಂಬುದನ್ನೂ ಜ್ಞಾಪಕಮಾಡಿಕೊಳ್ಳಿರಿ.