Deuteronomy 12:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ತನ್ನ ವಿಶೇಷವಾದ ಸ್ಥಳವನ್ನು ನಿಮ್ಮ ಕುಲಗಳವರ ಮಧ್ಯದಿಂದ ಆರಿಸಿಕೊಳ್ಳುವನು. ನಿಮ್ಮ ಸರ್ವಾಂಗಹೋಮಗಳನ್ನು ಮತ್ತು ನಾನು ನಿಮಗೆ ಹೇಳಿದವುಗಳೆಲ್ಲವನ್ನು ಅದೇ ಸ್ಥಳದಲ್ಲಿ ಮಾಡಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮ ಕುಲಗಳಲ್ಲಿ ಯಾವುದೋ ಒಂದು ಕುಲದಲ್ಲಿ ಯೆಹೋವನು ಆರಿಸಿಕೊಳ್ಳುವ ಸ್ಥಳದಲ್ಲೇ ನಿಮ್ಮ ಸರ್ವಾಂಗಹೋಮಗಳನ್ನು ಸಮರ್ಪಿಸಬೇಕು; ಅಲ್ಲಿಯೇ ನಾನು ಆಜ್ಞಾಪಿಸಿದ ಎಲ್ಲಾ ಆಚಾರಗಳನ್ನು ನಡೆಸಬೇಕು.
Kannada BSI Bible 2016
ಕರ್ತನು ನಿನ್ನ ಗೋತ್ರಗಳಲ್ಲಿ ಒಂದನ್ನು ಆದು ಕೊಳ್ಳುವ ಸ್ಥಳದಲ್ಲೇ ನಿನ್ನ ದಹನಬಲಿಗಳನ್ನು ಅರ್ಪಿಸಬೇಕು; ಅಲ್ಲೇ ನಾನು ನಿನಗೆ ಆಜ್ಞಾಪಿಸು ವದನ್ನೆಲ್ಲಾ ಮಾಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮ ಕುಲಗಳಲ್ಲಿ ಯಾವದೋ ಒಂದು ಕುಲದಲ್ಲಿ ಯೆಹೋವನು ಆದುಕೊಳ್ಳುವ ಸ್ಥಳದಲ್ಲೇ ನಿಮ್ಮ ಸರ್ವಾಂಗಹೋಮಗಳನ್ನು ಸಮರ್ಪಿಸಬೇಕು; ಅಲ್ಲಿಯೇ ನಾನು ಆಜ್ಞಾಪಿಸಿದ ಎಲ್ಲಾ ಆಚಾರಗಳನ್ನು ನಡಿಸಬೇಕು.
Kannada Bible (KNCL) BSI 2016
ನಿಮ್ಮ ಯಾವುದಾದರೊಂದು ಕುಲದಲ್ಲಿ ಸರ್ವೇಶ್ವರ ಆರಿಸಿಕೊಳ್ಳುವ ಸ್ಥಳದಲ್ಲೇ ನಿಮ್ಮ ದಹನಬಲಿಗಳನ್ನು ಸಮರ್ಪಿಸಬೇಕು; ಅಲ್ಲಿಯೇ ನಾನು ಆಜ್ಞಾಪಿಸುವ ಎಲ್ಲಾ ಆಚಾರಗಳನ್ನು ನಡೆಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ನಿಮ್ಮ ಗೋತ್ರಗಳ ಒಂದರಲ್ಲಿ ಆಯ್ದುಕೊಳ್ಳುವ ಸ್ಥಳದಲ್ಲೇ ನೀವು ನಿಮ್ಮ ದಹನಬಲಿಗಳನ್ನು ಅರ್ಪಿಸಬೇಕು. ಅಲ್ಲೇ ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ಮಾಡಬೇಕು.