Deuteronomy 12:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜಿಂಕೆಯನ್ನಾಗಲಿ ಸಾರಂಗವನ್ನಾಗಲಿ ತಿನ್ನುವಂತೆ ನೀವು ಈ ಮಾಂಸವನ್ನು ತಿನ್ನಬಹುದು. ಶುದ್ಧರಾಗಿರುವವರೂ ಅಶುದ್ಧರಾಗಿರುವವರೂ ಈ ಮಾಂಸವನ್ನು ತಿನ್ನಬಹುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜಿಂಕೆದುಪ್ಪಿಗಳನ್ನು ಶುದ್ಧರೂ ಮತ್ತು ಅಶುದ್ಧರೂ ತಿನ್ನುವ ಪ್ರಕಾರ ದನ ಮತ್ತು ಕುರಿಗಳನ್ನೂ ತಿನ್ನಬಹುದು.
Kannada BSI Bible 2016
ಆದರೆ ಜಿಂಕೆ ಕಡವೆಗಳನ್ನು ಉಣ್ಣುವ ಹಾಗೆ ಅದನ್ನು ಉಣ್ಣಬೇಕು. ಶುದ್ಧನೂ ಅಶುದ್ಧನೂ ಕೂಡ ಅದೇ ರೀತಿಯಲ್ಲಿ ಅದನ್ನು ತಿನ್ನಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಜಿಂಕೆದುಪ್ಪಿಗಳನ್ನು ಶುದ್ಧರೂ ಅಶುದ್ಧರೂ ತಿನ್ನುವ ಪ್ರಕಾರ ದನಕುರಿಗಳನ್ನೂ ತಿನ್ನಬಹುದು.
Kannada Bible (KNCL) BSI 2016
ಜಿಂಕೆ ದುಪ್ಪಿಗಳನ್ನು ಶುದ್ಧರೂ ಅಶುದ್ಧರೂ ತಿನ್ನುವ ಪ್ರಕಾರ ದನಕುರಿಗಳನ್ನೂ ತಿನ್ನಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಚಾರದ ಪ್ರಕಾರ ಶುದ್ಧರೂ, ಅಶುದ್ಧರೂ ಜಿಂಕೆದುಪ್ಪಿಗಳ ಮಾಂಸವನ್ನು ತಿನ್ನುವ ಪ್ರಕಾರ ಇವುಗಳನ್ನು ತಿನ್ನಬಹುದು.