Deuteronomy 13:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಎಂದರೆ ಆ ವ್ಯಕ್ತಿಯ ಸಲಹೆಗೆ ನೀವು ಒಪ್ಪಬಾರದು. ಅವನಿಗೆ ಕಿವಿಗೊಡಬೇಡಿ; ಅವನಿಗೆ ಕನಿಕರತೋರಬೇಡಿ; ಅವನು ಸ್ವತಂತ್ರನಾಗಿ ಹೋಗಲು ಬಿಡಬೇಡಿ; ಅವನನ್ನು ಸಂರಕ್ಷಿಸಬೇಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ಸಮ್ಮತಿಸಲೂ ಬಾರದು ಮತ್ತು ಕಿವಿಗೊಡಲೂಬಾರದು. ಅವನನ್ನು ಕನಿಕರಿಸಲೂಬಾರದು, ತಪ್ಪಿಸಲೂಬಾರದು, ಬಚ್ಚಿಡಲೂಬಾರದು ಅವನನ್ನು ಕೊಲ್ಲಿಸಲೇಬೇಕು.
Kannada BSI Bible 2016
ನೀನು ಅವನಿಗೆ ಸಮ್ಮತಿಸಬಾರದು; ಅವನ ಮಾತನ್ನು ಕೇಳಬಾರದು; ನಿನ್ನ ಕಣ್ಣು ಅವನನ್ನು ಕರುಣಿಸಬಾರದು; ನೀನು ಅವ ನನ್ನು ಕನಿಕರಿಸಬಾರದು ಇಲ್ಲವೆ ಬಚ್ಚಿಡಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನನ್ನು ಕನಿಕರಿಸಕೂಡದು, ತಪ್ಪಿಸಕೂಡದು, ಬಚ್ಚಿಡಕೂಡದು; ಕೊಲ್ಲಿಸಲೇಬೇಕು.
Kannada Bible (KNCL) BSI 2016
ನೀವು ಸಮ್ಮತಿಸಲೂ ಬಾರದು; ಕಿವಿಗೊಡಲೂ ಬಾರದು. ಅಂಥವನನ್ನು ಕನಿಕರಿಸಕೂಡದು, ತಪ್ಪಿಸಕೂಡದು, ಬಚ್ಚಿಡಕೂಡದು; ಬದಲಿಗೆ ಕೊಲ್ಲಿಸಲೇಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಅವರಿಗೆ ಸಮ್ಮತಿಸಬಾರದು. ಅವರ ಮಾತನ್ನು ಕೇಳಬಾರದು. ನೀವು ಅವರನ್ನು ಕನಿಕರಿಸಬಾರದು ಇಲ್ಲವೆ ಬಚ್ಚಿಡಬಾರದು.