Deuteronomy 14:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಒಂಟೆ, ಮೊಲ, ಬೆಟ್ಟದ ಮೊಲ ಇವುಗಳನ್ನು ತಿನ್ನಬಾರದು. ಈ ಪ್ರಾಣಿಗಳು ಮೆಲುಕು ಹಾಕುತ್ತವೆ ಆದರೆ ಅವುಗಳ ಗೊರಸು ಸೀಳಿಲ್ಲ. ಆದ್ದರಿಂದ ಅವುಗಳು ಶುದ್ಧಪ್ರಾಣಿಗಳಲ್ಲ. ನೀವು ಅವುಗಳನ್ನು ಆಹಾರವಾಗಿ ಉಪಯೋಗಿಸಕೂಡದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಯಾವ ಪ್ರಾಣಿಯು ಮೆಲಕುಹಾಕಿದರೂ ಗೊರಸು ಸೀಳಿರುವುದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲಕು ಹಾಕುವುದಿಲ್ಲವೋ, ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆ: ಒಂಟೆ, ಮೊಲ, ಬೆಟ್ಟದಮೊಲ ಇವುಗಳು ಮೆಲಕುಹಾಕುವಂಥವುಗಳಾದರೂ ಸೀಳುಗೊರಸು ಇಲ್ಲವಾದ ಕಾರಣ ಅವು ನಿಮಗೆ ಅಶುದ್ಧ.
Kannada BSI Bible 2016
ಆದರೆ ಮೆಲುಕು ಹಾಕಿ ಉಗುರುಳ್ಳ ಗೊರಸೆಯನ್ನು ಭೇದಿಸಿಕೊಂಡಿರುವವು ಗಳಲ್ಲಿ ಇವುಗಳನ್ನು ನೀವು ತಿನ್ನಬಾರದು; ಯಾವ ವೆಂದರೆ: ಒಂಟೆ, ಮೊಲ, ಕುಣಿಮೊಲ. ಯಾಕಂದರೆ ಅವು ಮೆಲುಕು ಹಾಕಿದರೂ ಗೊರಸೆಯನ್ನು ಭೇದಿಸು ವದಿಲ್ಲ; ಅವು ನಿಮಗೆ ಅಶುದ್ಧವಾಗಿವೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಯಾವ ಪ್ರಾಣಿಯು ಮೆಲಕುಹಾಕಿದರೂ ಗೊರಸು ಸೀಳಿರುವದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲಕುಹಾಕುವದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ದೃಷ್ಟಾಂತ - ಒಂಟೆ, ಮೊಲ, ಬೆಟ್ಟದ ಮೊಲ ಇವುಗಳು ಮೆಲಕುಹಾಕುವಂಥವುಗಳಾದರೂ ಸೀಳುಗೊರಸು ಇಲ್ಲವಾದ ಕಾರಣ ಅವು ನಿಮಗೆ ಅಶುದ್ಧ.
Kannada Bible (KNCL) BSI 2016
ಆದರೆ ಯಾವ ಪ್ರಾಣಿ ಮೆಲುಕು ಹಾಕಿದರೂ ಗೊರಸು ಸೀಳಿರುವುದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲುಕು ಹಾಕುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆಗೆ, ಒಂಟೆ, ಮೊಲ, ಬೆಟ್ಟದ ಮೊಲ ಇವುಗಳು ಮೆಲುಕು ಹಾಕುವಂಥವುಗಳಾದರೂ ಸೀಳುಗೊರಸು ಇಲ್ಲವಾದ ಕಾರಣ ಅವು ನಿಮಗೆ ಅಶುದ್ಧ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಯಾವ ಪ್ರಾಣಿ ಮೆಲುಕು ಹಾಕಿದರೂ ಗೊರಸು ಸೀಳಿರುವುದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲುಕು ಹಾಕುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆಗೆ, ಒಂಟೆ, ಮೊಲ, ಬೆಟ್ಟದ ಮೊಲ ಇವು ಮೆಲುಕು ಹಾಕುವಂಥವುಗಳಾದರೂ, ಸೀಳುಗೊರಸು ಇಲ್ಲವಾದದ್ದರಿಂದ ಅವು ನಿಮಗೆ ಅಶುದ್ಧ.