Deuteronomy 15:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನೀವು ಹೀಬ್ರೂ ಮನುಷ್ಯನನ್ನೋ ಸ್ತ್ರೀಯನ್ನೋ ನಿಮ್ಮ ಗುಲಾಮರಾಗಿ ಕ್ರಯಕ್ಕೆ ತೆಗೆದುಕೊಳ್ಳಬಹುದು. ಅವರನ್ನು ನಿಮ್ಮ ಗುಲಾಮರಾಗಿ ಆರು ವರ್ಷಗಳ ಕಾಲ ಇಟ್ಟುಕೊಳ್ಳಬಹುದು. ಆದರೆ ಏಳನೆಯ ವರ್ಷದಲ್ಲಿ ನೀವು ಅವರನ್ನು ಸ್ವತಂತ್ರರಾಗಿ ಬಿಟ್ಟುಬಿಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸ್ವದೇಶದವರೊಳಗೆ ಯಾವ ಇಬ್ರಿಯ ಪುರುಷನಾಗಲಿ, ಸ್ತ್ರೀಯಾಗಲಿ ನಿಮಗೆ ದಾಸರಾಗಿರುವುದಕ್ಕಾಗಿ ಮಾರಲ್ಪಡುವ ಪಕ್ಷಕ್ಕೆ, ಅಂಥವರು ಆರು ವರ್ಷಗಳವರೆಗೂ ನಿಮ್ಮ ಸೇವೆ ಮಾಡಲಿ; ಏಳನೆಯ ವರ್ಷದಲ್ಲಿ ನೀವು ಅವರನ್ನು ಬಿಡುಗಡೆ ಮಾಡಬೇಕು.
Kannada BSI Bible 2016
ನಿನ್ನ ಸಹೋದರನಾದ ಇಬ್ರಿಯನಾಗಲಿ ಒಬ್ಬ ಇಬ್ರಿಯ ಸ್ತ್ರೀಯಾಗಲಿ ನಿನಗೆ ಮಾರಲ್ಪಟ್ಟು ಆರು ವರುಷ ನಿನಗೆ ಸೇವೆಮಾಡಿದ್ದರೆ ಏಳನೇ ವರುಷದಲ್ಲಿ ಅವನನ್ನು ಬಿಡುಗಡೆಮಾಡಿ ಕಳುಹಿಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸ್ವದೇಶದವರೊಳಗೆ ಯಾವ ಇಬ್ರಿಯ ಪುರುಷನಾಗಲಿ ಸ್ತ್ರೀಯಾಗಲಿ ನಿಮಗೆ ದಾಸರಾಗಿರುವದಕ್ಕಾಗಿ ಮಾರಲ್ಪಡುವ ಪಕ್ಷಕ್ಕೆ ಅಂಥವರು ಆರು ವರುಷಗಳವರೆಗೂ ನಿಮ್ಮ ಸೇವೆಮಾಡಲಿ; ಏಳನೆಯ ವರುಷದಲ್ಲಿ ನೀವು ಅವರನ್ನು ಬಿಟ್ಟುಬಿಡಬೇಕು.
Kannada Bible (KNCL) BSI 2016
“ಸ್ವದೇಶದವರಲ್ಲಿ ಯಾವ ಹಿಬ್ರಿಯ ಪುರುಷನಾಗಲಿ, ಸ್ತ್ರೀಯಾಗಲಿ ನಿಮಗೆ ಗುಲಾಮರಾಗಿ ಮಾರಲ್ಪಟ್ಟಿದ್ದರೆ ಅಂಥವರು ಆರು ವರ್ಷಗಳವರೆಗೂ ನಿಮ್ಮ ಸೇವೆ ಮಾಡಲಿ, ಏಳನೆಯ ವರ್ಷದಲ್ಲಿ ನೀವು ಅವರನ್ನು ಬಿಟ್ಟುಬಿಡಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮ ಸಹೋದರನಾದ ಹಿಬ್ರಿಯನಾಗಲಿ, ಒಬ್ಬ ಹಿಬ್ರಿಯ ಸ್ತ್ರೀಯಾಗಲಿ ನಿಮಗೆ ಗುಲಾಮರಾಗಿ, ಆರು ವರ್ಷ ನಿಮಗೆ ಮಾರಾಟವಾಗಿದ್ದರೆ ಮತ್ತು ಸೇವೆ ಮಾಡಿದ್ದರೆ, ಏಳನೆಯ ವರ್ಷದಲ್ಲಿ ಅವರನ್ನು ಬಿಡುಗಡೆ ಮಾಡಿ ಕಳುಹಿಸಿಬಿಡಿರಿ.