Deuteronomy 15:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಒಬ್ಬನು ಇನ್ನೊಬ್ಬ ಇಸ್ರೇಲನಿಗೆ ಸಾಲಕೊಟ್ಟರೆ ಆ ಸಾಲವನ್ನು ವಜಾಮಾಡಬೇಕು. ತನ್ನ ಸಹೋದರನಾದ ಇಸ್ರೇಲನಿಂದ ಸಾಲ ಹಿಂದೆ ಕೇಳಬಾರದು. ಆ ವರ್ಷದಲ್ಲಿ ಸಾಲವನ್ನೆಲ್ಲಾ ವಜಾ ಮಾಡಬೇಕೆಂಬುದಾಗಿ ದೇವರು ಆದೇಶವನ್ನು ನೀಡಿದ್ದಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೇಗೆಂದರೆ ಯೆಹೋವನು ನೇಮಿಸಿದ ಬಿಡುಗಡೆಯ ವರ್ಷವು ಬಂತೆಂದು ಪ್ರಕಟವಾದುದರಿಂದ ಸಾಲಕೊಟ್ಟವನು ತೆಗೆದುಕೊಂಡವನಿಗೆ ಆ ಸಾಲವನ್ನು ಬಿಟ್ಟುಬಿಡಬೇಕು. ಅವನು ಸ್ವದೇಶದವನಿಗೆ ಕೊಟ್ಟ ಸಾಲವನ್ನು ಕೇಳಬಾರದು.
Kannada BSI Bible 2016
ಬಿಡು ಗಡೆಯ ಕ್ರಮವೇನೆಂದರೆ: ಸಾಲ ಕೊಟ್ಟವರೆಲ್ಲರೂ ತಮ್ಮ ನೆರೆಯವರಿಗೆ ಕೊಟ್ಟ ಸಾಲವನ್ನು ಬಿಟ್ಟುಬಿಡ ಬೇಕು; ಅದು ಕರ್ತನ ಬಿಡುಗಡೆ ಎಂದು ಕರೆಯಲ್ಪಟ್ಟ ಕಾರಣ ತನ್ನ ನೆರೆಯವನಿಂದಲೂ ತನ್ನ ಸಹೋದರ ನಿಂದಲೂ ಸಾಲ ತೆಗೆದುಕೊಳ್ಳಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೇಗಂದರೆ ಯೆಹೋವನು ನೇವಿುಸಿದ ಬಿಡುಗಡೆಯ ಸಂವತ್ಸರವು ಬಂತೆಂದು ಪ್ರಕಟವಾದದರಿಂದ ಸಾಲಕೊಟ್ಟವನು ತೆಗೆದುಕೊಂಡವನಿಗೆ ಆ ಸಾಲವನ್ನು ಬಿಟ್ಟುಬಿಡಬೇಕು; ಅವನು ಸ್ವದೇಶದವನಿಗೆ ಕೊಟ್ಟ ಸಾಲವನ್ನು ಕೇಳಬಾರದು.
Kannada Bible (KNCL) BSI 2016
ಹೇಗೆಂದರೆ, ಸರ್ವೇಶ್ವರನೇ ನೇಮಿಸಿದ ಬಿಡುಗಡೆಯ ಸಂವತ್ಸರ ಪ್ರಕಟವಾಗಿದೆ. ಆದುದರಿಂದ ಸಾಲಕೊಟ್ಟವನು ತೆಗೆದುಕೊಂಡವನಿಗೆ ಆ ಸಾಲವನ್ನು ಬಿಟ್ಟುಬಿಡಬೇಕು; ಅವನು ಸ್ವದೇಶದವನಿಗೆ ಕೊಟ್ಟ ಸಾಲವನ್ನು ಕೇಳಬಾರದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಮಾಡಬೇಕಾದ ಕ್ರಮವೇನೆಂದರೆ: ಸಾಲ ಕೊಟ್ಟವರೆಲ್ಲರೂ ತಮ್ಮ ನೆರೆಯವರಾದ ಇಸ್ರಾಯೇಲರಿಗೆ ಕೊಟ್ಟ ಸಾಲವನ್ನು ಬಿಟ್ಟುಬಿಡಬೇಕು. ಅದು ಯೆಹೋವ ದೇವರ ಬಿಡುಗಡೆಯ ವರ್ಷ ಎಂದು ಪ್ರಕಟವಾಗಿರುವುದರಿಂದ ತನ್ನ ನೆರೆಯವನಿಂದಲೂ, ತನ್ನ ಸಹೋದರನಿಂದಲೂ ಸಾಲವನ್ನು ಕೇಳಬಾರದು.