Deuteronomy 15:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಸಾಲ ವಜಾಮಾಡುವ ಏಳನೆಯ ವರ್ಷ ಸಮೀಪವಾಯಿತೆಂದು ನೀವು ಯಾರಿಗೂ ಸಾಲ ಕೊಡದೇ ಸಹಾಯ ಮಾಡದೇ ಇರಬಾರದು. ಅಂಥಾ ದುಷ್ಟ ಆಲೋಚನೆ ನಿಮ್ಮ ಮನಸ್ಸಿನೊಳಗೆ ಹುಟ್ಟದಿರಲಿ. ಸಹಾಯದ ಅಗತ್ಯವಿರುವ ವ್ಯಕ್ತಿಯ ಬಗ್ಗೆ ನಿಮ್ಮಲ್ಲಿ ಯಾವ ಕೆಟ್ಟ ಆಲೋಚನೆಯೂ ಇರಬಾರದು. ನೀವು ಆ ಬಡ ವ್ಯಕ್ತಿಗೆ ಸಹಾಯ ಮಾಡದಿದ್ದರೆ ನಿಮ್ಮ ವಿರುದ್ಧವಾಗಿ ಅವನು ಯೆಹೋವನಿಗೆ ದೂರು ಹೇಳುವನು. ಆಗ ನೀವು ಯೆಹೋವನ ಮುಂದೆ ದೋಷಿಗಳಾಗಿ ಕಂಡುಬರುವಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು “ಬಿಡುಗಡೆಯುಂಟಾಗುವ ಏಳನೆಯ ವರ್ಷವು ಸಮೀಪವಾಯಿತು” ಎಂಬ ನೀಚವಾದ ಆಲೋಚನೆಯನ್ನು ಮಾಡಿ, ಆ ಬಡ ಸಹೋದರನಿಗೆ ಏನೂ ಕೊಡದೆ ಇರಬಾರದು, ಎಚ್ಚರಿಕೆ! ಹಾಗೆ ಧಿಕ್ಕರಿಸಿದರೆ ಅವನು ಒಂದು ವೇಳೆ ನಿಮ್ಮ ವಿಷಯದಲ್ಲಿ ಯೆಹೋವನಿಗೆ ಮೊರೆಯಿಟ್ಟಾನು, ನೀವು ದೋಷಿಗಳಾಗಿ ಕಂಡುಬರುವಿರಿ.
Kannada BSI Bible 2016
ಬಿಡುಗಡೆಯ ವರುಷ ವಾದ ಏಳನೇ ವರುಷವು ಸವಿಾಪವಾಯಿತೆಂಬ ದುಷ್ಟಾಲೋಚನೆ ನಿನ್ನ ಹೃದಯದಲ್ಲಿ ಹುಟ್ಟಿ ನಿನ್ನ ಬಡ ಸಹೋದರನ ಮೇಲೆ ನಿನ್ನ ಕಣ್ಣು ಕೆಟ್ಟದ್ದಾಗಿ ನೀನು ಅವನಿಗೆ ಏನೂ ಕೊಡದೆ ಇರುವದರಿಂದ ಅವನು ನಿನಗೆ ವಿರೋಧವಾಗಿ ಕರ್ತನಿಗೆ ಕೂಗುವಾಗ ನಿನ್ನಲ್ಲಿ ಪಾಪ ಉಂಟಾಗದ ಹಾಗೆ ನೋಡಿಕೋ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು - ಬಿಡುಗಡೆಯುಂಟಾಗುವ ಏಳನೆಯ ವರುಷವು ಸಮೀಪವಾಯಿತೆಂದು ನೀಚವಾದ ಆಲೋಚನೆಯನ್ನು ಮಾಡಿ ಆ ಬಡ ಸಹೋದರನ ವಿಷಯದಲ್ಲಿ ಮೋರೆ ಕರ್ರಗೆಮಾಡಿಕೊಂಡು ಏನೂ ಕೊಡದೆ ಇರಬಾರದು, ನೋಡಿರಿ. [ಹಾಗೆ ಧಿಕ್ಕರಿಸಿದರೆ] ಅವನು ಒಂದು ವೇಳೆ ನಿಮ್ಮ ವಿಷಯದಲ್ಲಿ ಯೆಹೋವನಿಗೆ ಮೊರೆಯಿಟ್ಟಾನು, ನೀವು ದೋಷಿಗಳಾಗಿ ತೋರಿಬಂದೀರಿ.
Kannada Bible (KNCL) BSI 2016
ಬಿಡುಗಡೆಯಾಗುವ ಏಳನೆಯ ವರ್ಷ ಸಮೀಪಿಸಿಬಿಟ್ಟಿತು ಎಂದು ನೀಚವಾದ ಆಲೋಚನೆಮಾಡಿ, ಬಡ ಸಹೋದರನ ಬಗ್ಗೆ ಮೋರೆ ಕರ್ರಗೆಮಾಡಿಕೊಂಡು, ಅವನಿಗೆ ಏನೂ ಕೊಡದೆ ಇರಬಾರದು, ಎಚ್ಚರಿಕೆ! ಹಾಗೆ ಸಹಾಯವನ್ನು ನಿರಾಕರಿಸಿದರೆ, ಅವನು ನಿಮ್ಮ ಬಗ್ಗೆ ಸರ್ವೇಶ್ವರನಿಗೆ ಮೊರೆ ಇಡುವನು; ಆಗ ನೀವು ದೋಷಿಗಳಾಗುತ್ತೀರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಸಾಲ ಬಿಡುಗಡೆಯ ವರ್ಷವಾದ ಏಳನೆಯ ವರ್ಷವು ಸಮೀಪವಾಯಿತು,” ಎಂಬ ದುಷ್ಟ ಆಲೋಚನೆ ನಿಮ್ಮ ಹೃದಯದಲ್ಲಿ ಹುಟ್ಟಿ, ನಿಮ್ಮ ಬಡ ಸಹೋದರನ ಮೇಲೆ ಕಠಿಣವಾಗಿ, ನೀವು ಅವನಿಗೆ ಏನೂ ಕೊಡದೆ ಇರಬೇಡಿರಿ. ಅವನು ನಿಮಗೆ ವಿರೋಧವಾಗಿ ಯೆಹೋವ ದೇವರಿಗೆ ಮೊರೆ ಇಟ್ಟಾಗ, ನಿಮ್ಮಲ್ಲಿ ಅಪರಾಧ ಉಂಟಾಗದಂತೆ ನೋಡಿಕೊಳ್ಳಿರಿ.