Deuteronomy 16:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಏಳು ದಿನಗಳ ತನಕ ಇಡೀ ದೇಶದಲ್ಲಿ ಯಾರ ಮನೆಯಲ್ಲಿಯಾದರೂ ರೊಟ್ಟಿಗೆ ಬೆರೆಸುವ ಹುಳಿಯು ಇರಬಾರದು. ಮತ್ತು ಮೊದಲನೇ ದಿನದ ಸಾಯಂಕಾಲ ನೀವು ವಧಿಸುವ ಪ್ರಾಣಿಯ ಮಾಂಸವನ್ನು ಮುಂಜಾನೆಯೊಳಗೆ ತಿಂದು ಮುಗಿಸತಕ್ಕದ್ದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಏಳು ದಿನಗಳು ನಿಮ್ಮ ದೇಶದಲ್ಲೆಲ್ಲಾ ಹುಳಿಬೆರೆತ ಯಾವ ಪದಾರ್ಥವೂ ನಿಮ್ಮ ಬಳಿಯಲ್ಲಿ ಇರಲೇಬಾರದು. ಮೊದಲನೆಯ ದಿನದ ಸಂಜೆಯಲ್ಲಿ ನೀವು ವಧಿಸಿದ ಪಶುಮಾಂಸದಲ್ಲಿ ಸ್ವಲ್ಪವನ್ನೂ ಮರುದಿನದ ವರೆಗೆ ಉಳಿಸಬಾರದು.
Kannada BSI Bible 2016
ಏಳು ದಿವಸ ಹುಳಿ ಕಲಸಿದ ರೊಟ್ಟಿ ನಿನ್ನ ಮೇರೆಗಳಲ್ಲೆಲ್ಲೂ ಕಾಣಬಾರದು. ಮೊದಲನೇ ದಿನದ ಸಾಯಂಕಾಲದಲ್ಲಿ ನೀನು ಕೊಯ್ದ ಮಾಂಸದಲ್ಲಿ ಏನಾದರೂ ಮರು ದಿವಸದ ವರೆಗೆ ಉಳಿಸಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಏಳು ದಿವಸವೂ ನಿಮ್ಮ ದೇಶದಲ್ಲೆಲ್ಲಾ ಹುಳಿಬೆರೆದ ಯಾವ ಪದಾರ್ಥವೂ ನಿಮ್ಮ ಬಳಿಯಲ್ಲಿ ಇರಲೇಬಾರದು. ಮೊದಲನೆಯ ದಿನದ ಸಂಜೆಯಲ್ಲಿ ನೀವು ವಧಿಸಿದ ಪಶುಮಾಂಸದಲ್ಲಿ ಸ್ವಲ್ಪವನ್ನಾದರೂ ಮರುದಿನದವರೆಗೆ ಉಳಿಸಬಾರದು.
Kannada Bible (KNCL) BSI 2016
ಆ ಏಳು ದಿವಸವೂ ನಿಮ್ಮ ನಾಡಿನಲ್ಲೆಲ್ಲಾ ಹುಳಿಬೆರೆತ ಯಾವ ಪದಾರ್ಥವೂ ನಿಮ್ಮ ಬಳಿ ಇರಬಾರದು. ಮೊದಲನೆಯ ದಿನದ ಸಂಜೆಯಲ್ಲಿ ನೀವು ವಧಿಸಿದ ಪಶುಮಾಂಸದಲ್ಲಿ ಸ್ವಲ್ಪವನ್ನಾದರೂ ಮರುದಿನದವರೆಗೆ ಉಳಿಸಬಾರದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಳು ದಿವಸ ಹುಳಿ ಕಲಸಿದ ರೊಟ್ಟಿ ನಿಮ್ಮ ಮೇರೆಗಳಲ್ಲಿ ಎಲ್ಲಿಯೂ ಕಾಣಬಾರದು. ಮೊದಲನೆಯ ದಿವಸದ ಸಾಯಂಕಾಲದಲ್ಲಿ ನೀವು ಯಜ್ಞವಾಗಿ ಸಮರ್ಪಿಸಿದ ಮಾಂಸದಲ್ಲಿ ಏನೂ ಮರುದಿವಸದವರೆಗೆ ಉಳಿಯಬಾರದು.