Deuteronomy 2:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
(ಆ ಪ್ರದೇಶವನ್ನು ರೆಫಾಯ ದೇಶವೆಂದೂ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ರೆಫಾಯರು ಅಲ್ಲಿ ವಾಸಿಸುತ್ತಿದ್ದರು. ಅಮ್ಮೋನಿಯರು ಅವರನ್ನು ಜಮ್‌ಜುಮ್ಯರು ಎಂದು ಕರೆಯುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪೂರ್ವಕಾಲದಲ್ಲಿ ರೆಫಾಯರು ಆ ದೇಶದಲ್ಲಿ ವಾಸವಾಗಿದ್ದುದರಿಂದ ಅದು ರೆಫಾಯರ ದೇಶವೆನಿಸಿಕೊಳ್ಳುತ್ತದೆ. ಅಮ್ಮೋನಿಯರು ಅವರನ್ನು ಜಂಜುಮ್ಯರೆಂದು ಹೇಳುತ್ತಾರೆ.
Kannada BSI Bible 2016
(ಇದು ಸಹ ರಾಕ್ಷಸರ ದೇಶವೆನಿಸಿಕೊಂಡಿತು; ಪೂರ್ವದಲ್ಲಿ ರಾಕ್ಷಸರು ಅದರಲ್ಲಿ ವಾಸಮಾಡಿದರು; ಅಮ್ಮೋನಿಯರು ಅವರಿಗೆ ಜಂಜುಮ್ಯರೆಂದು ಕರೆದರು.
Kannada BSI JV (ಕನ್ನಡ ಸತ್ಯವೇದವು J.V. (BSI))
(ಪೂರ್ವಕಾಲದಲ್ಲಿ ರೆಫಾಯರು ಆ ದೇಶದಲ್ಲಿ ವಾಸವಾಗಿದ್ದದರಿಂದ ಅದೂ ರೆಫಾಯರ ದೇಶವೆನಿಸಿಕೊಳ್ಳುತ್ತದೆ. ಅಮ್ಮೋನಿಯರು ಅವರನ್ನು ಜಂಜುಮ್ಯರೆಂದು ಹೇಳುತ್ತಾರೆ;
Kannada Bible (KNCL) BSI 2016
(ಪೂರ್ವಕಾಲದಲ್ಲಿ ರೆಫಾಯರು ಆ ನಾಡಿನಲ್ಲಿ ವಾಸವಾಗಿದ್ದುದರಿಂದ ಅದು ಕೂಡ ರೆಫಾಯರ ನಾಡೆನಿಸಿಕೊಳ್ಳುತ್ತದೆ. ಅಮ್ಮೋನಿಯರು ಅವರನ್ನು ಜಂಜುಮ್ಯರೆಂದು ಕರೆಯುತ್ತಾರೆ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪೂರ್ವಕಾಲದಲ್ಲಿ ರೆಫಾಯರು ಆ ದೇಶದಲ್ಲಿ ವಾಸವಾಗಿದ್ದುದರಿಂದ ಅದು ಸಹ ರೆಫಾಯರ ದೇಶವೆನಿಸಿಕೊಳ್ಳುತ್ತದೆ. ಅಮ್ಮೋನಿಯರು ಅವರಿಗೆ ಜಂಜುಮ್ಯರೆಂದು ಕರೆದರು.