Deuteronomy 2:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜಮ್‌ಜುಮ್ಯರು ತುಂಬಾ ಬಲಶಾಲಿಗಳಾಗಿದ್ದರು; ಅನಾಕ್ಯರಂತೆ ಉನ್ನತ ಪುರುಷರಾಗಿದ್ದರು. ಆದರೆ ಯೆಹೋವನು ಜಮ್‌ಜುಮ್ಯರನ್ನು ಸೋಲಿಸಲು ಅಮೋರಿಯರಿಗೆ ಸಹಾಯ ಮಾಡಿದನು. ಅಮೋರಿಯರು ಆ ದೇಶವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಈಗ ಅದರಲ್ಲಿ ನೆಲೆಸಿರುತ್ತಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಬಲಿಷ್ಠರೂ, ಬಹುಜನರೂ ಮತ್ತು ಅನಾಕ್ಯರಂತೆ ಎತ್ತರವಾದ ಪುರುಷರೂ ಆಗಿದ್ದರು.
Kannada BSI Bible 2016
ಅವರು ಅನಾಕ್ಯರ ಹಾಗೆ ದೊಡ್ಡವರೂ ಬಹಳವಾದ ವರೂ ಉದ್ದವಾದವರೂ ಆಗಿರುವ ಜನರು; ಆದರೆ ಕರ್ತನು ಅವರನ್ನು ಇವರ ಮುಂದೆ ನಾಶಮಾಡಿದ್ದರಿಂದ ಇವರು ಅವರನ್ನು ಹೊರಡಿಸಿ ಅವರ ಬದಲಾಗಿ ವಾಸಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಬಲಿಷ್ಠರೂ ಬಹುಜನವೂ ಅನಾಕ್ಯರಂತೆ ಉನ್ನತರಾದವರೂ ಆಗಿದ್ದರು.
Kannada Bible (KNCL) BSI 2016
ಅವರು ಬಲಿಷ್ಠರು, ಬಹುಜನರು ಹಾಗು ಅನಾಕಿಮರಂತೆ ಎತ್ತರದವರೂ ಆಗಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಅನಾಕ್ಯರ ಹಾಗೆ ಬಲಿಷ್ಠರೂ ಬಹುಜನರೂ ಎತ್ತರವಾದವರೂ ಆಗಿದ್ದರು. ಆದರೆ ಯೆಹೋವ ದೇವರು ಅವರನ್ನು ಅಮ್ಮೋನಿಯರ ಮುಂದೆ ತೆಗೆದುಹಾಕಿದ್ದರು. ಹೀಗೆ ಅಮ್ಮೋನಿಯರು ಅವರನ್ನು ಹೊರಡಿಸಿ, ಅವರ ಬದಲಾಗಿ ವಾಸಿಸಿದರು.