Deuteronomy 2:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಏಸಾವನ ಜನರಿಗೂ ದೇವರು ಅದೇ ರೀತಿ ಮಾಡಿದನು. ಹಿಂದಿನ ಕಾಲದಲ್ಲಿ ಹೋರಿಯರು ಸೇಯೀರ್‌ನಲ್ಲಿ ವಾಸಿಸುತ್ತಿದ್ದರು. ಆದರೆ ಏಸಾವನ ಜನರು ಅವರನ್ನು ಸೋಲಿಸಿದರು. ಅವನ ಸಂತತಿಯವರು ಈಗಲೂ ಅಲ್ಲಿ ವಾಸಮಾಡುತ್ತಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಹೇಗೆ ಯೆಹೋವನು ಸೇಯೀರಿನಲ್ಲಿರುವ ಏಸಾವ್ಯರಿಗೋಸ್ಕರ ಹೋರಿಯರನ್ನು ಹೊರಡಿಸಿದಾಗ ಏಸಾವ್ಯರು ಆ ದೇಶವನ್ನು ಸ್ವಾಧೀನಮಾಡಿಕೊಂಡು ಇಂದಿನವರೆಗೂ ಅಲ್ಲೇ ವಾಸವಾಗಿದ್ದಾರೋ,
Kannada BSI Bible 2016
ಕರ್ತನು ಸೇಯಾರಿನಲ್ಲಿ ವಾಸವಾಗಿ ರುವ ಏಸಾವನ ಮಕ್ಕಳಿಗೆ ಮಾಡಿದ ಹಾಗಾಯಿತು. ಅವನು ಅವರ ಮುಂದೆ ಹೋರಿಯರನ್ನು ನಾಶ ಮಾಡಿದಾಗ ಅವರು ಇವರನ್ನು ಹೊರಡಿಸಿ ಇವರ ಬದಲಾಗಿ ಇಂದಿನ ವರೆಗೂ ವಾಸಿಸಿದ್ದವರಲ್ಲಾ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಹೇಗೆ ಯೆಹೋವನು ಸೇಯೀರಿನಲ್ಲಿರುವ ಏಸಾವ್ಯರಿಗೋಸ್ಕರ ಹೋರಿಯರನ್ನು ಹೊರಡಿಸಿದಾಗ ಏಸಾವ್ಯರು ಆ ದೇಶವನ್ನು ಸ್ವಾಧೀನಮಾಡಿಕೊಂಡು ಇಂದಿನವರೆಗೂ ಅಲ್ಲೇ ವಾಸವಾಗಿದ್ದಾರೋ,
Kannada Bible (KNCL) BSI 2016
ಆದರೆ ಹೇಗೆ ಸರ್ವೇಶ್ವರ ಸೇಯೀರಿನಲ್ಲಿರುವ ಏಸಾವ್ಯರ ಪರವಾಗಿ ಹೋರಿಯರನ್ನು ಹೊರದೂಡಿದಾಗ ಏಸಾವ್ಯರು ಆ ನಾಡನ್ನು ಸ್ವಾಧೀನಮಾಡಿಕೊಂಡು ಇಂದಿನವರೆಗೂ ಅಲ್ಲೇ ವಾಸವಾಗಿದ್ದಾರೋ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ಸೇಯೀರಿನಲ್ಲಿ ವಾಸವಾಗಿರುವ ಏಸಾವನ ಮಕ್ಕಳಿಗೆ ಮಾಡಿದ ಹಾಗೆ ಆಯಿತು. ದೇವರು ಅವರ ಮುಂದೆ ಹೋರಿಯರನ್ನು ತೆಗೆದುಹಾಕಿದರು. ಹೀಗೆ ಅವರು ಹೋರಿಯರನ್ನು ಹೊರಡಿಸಿ, ಇವರ ಬದಲಾಗಿ ಇಂದಿನವರೆಗೂ ವಾಸಿಸುತ್ತಿದ್ದಾರೆ.