Deuteronomy 2:31 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ನನಗೆ, ‘ನಾನು ನಿನಗೆ ಸೀಹೋನನನ್ನೂ ಅವನ ಎಲ್ಲಾ ಜನರನ್ನೂ ಅವನ ದೇಶವನ್ನೂ ನಿನಗೆ ಕೊಡುತ್ತೇನೆ. ಈಗ ಹೋಗಿ ಅವನ ದೇಶವನ್ನು ವಶಪಡಿಸಿಕೊ!’ ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತರುವಾಯ ಯೆಹೋವನು ನನಗೆ, “ಈಗ ನಾನು ಸೀಹೋನನನ್ನೂ ಮತ್ತು ಅವನ ದೇಶವನ್ನೂ ನಿಮಗೆ ವಶಪಡಿಸುವುದಕ್ಕೆ ಪ್ರಾರಂಭಿಸಿದ್ದೇನೆ; ಅದನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಪ್ರಾರಂಭಮಾಡಿರಿ” ಎಂದು ಹೇಳಿದನು.
Kannada BSI Bible 2016
ಇದಲ್ಲದೆ ಕರ್ತನು ನನಗೆ--ಇಗೋ, ಸೀಹೋ ನನನ್ನೂ ಅವನ ದೇಶವನ್ನೂ ನಿನ್ನ ಮುಂದೆ ಒಪ್ಪಿಸು ವದಕ್ಕೆ ಆರಂಭಮಾಡಿದ್ದೇನೆ; ಅವನ ದೇಶವನ್ನು ಸ್ವಾಸ್ತ್ಯವಾಗಿ ಹೊಂದುವ ಹಾಗೆ ಸ್ವತಂತ್ರಿಸಿಕೊಳ್ಳುವದಕ್ಕೆ ಆರಂಭಮಾಡು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ತರುವಾಯ ಯೆಹೋವನು ನನಗೆ - ಈಗ ನಾನು ಸೀಹೋನನನ್ನೂ ಅವನ ದೇಶವನ್ನೂ ನಿಮಗೆ ವಶಪಡಿಸುವದಕ್ಕೆ ಪ್ರಾರಂಭಿಸಿದ್ದೇನೆ; ಅದನ್ನು ಸ್ವಾಧೀನಮಾಡಿಕೊಳ್ಳುವದಕ್ಕೆ ಪ್ರಾರಂಭಮಾಡಿರಿ ಎಂದು ಹೇಳಿದನು.
Kannada Bible (KNCL) BSI 2016
“ತರುವಾಯ ಸರ್ವೇಶ್ವರ ನನಗೆ, ‘ಈಗ ನಾನು ಸೀಹೋನನನ್ನೂ ಅವನ ನಾಡನ್ನೂ ನಿಮಗೆ ವಶಪಡಿಸುವುದಕ್ಕೆ ಪ್ರಾರಂಭಿಸಿದ್ದೇನೆ; ಅದನ್ನು ಸ್ವಾಧೀನ ಮಾಡಿಕೊಳ್ಳಲು ಶುರುಮಾಡಿರಿ,’ ಎಂದು ಹೇಳಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಯೆಹೋವ ದೇವರು ನನಗೆ, “ಸೀಹೋನನನ್ನೂ ಅವನ ದೇಶವನ್ನೂ ನಿನ್ನ ಮುಂದೆ ಒಪ್ಪಿಸುವುದಕ್ಕೆ ಆರಂಭಮಾಡಿದ್ದೇನೆ, ಅವನ ದೇಶವನ್ನು ಸೊತ್ತಾಗಿ ಹೊಂದುವಂತೆ ವಶಪಡಿಸಿಕೊಳ್ಳುವುದಕ್ಕೆ ಆರಂಭಮಾಡು,” ಎಂದು ಹೇಳಿದರು.