Deuteronomy 2:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಹಾಗೆ ನಾವು ನಮ್ಮ ಸಂಬಂಧಿಕರಾದ ಏಸಾವನ ಜನರ ದೇಶದ ಮೂಲಕ ಪ್ರಯಾಣ ಬೆಳೆಸಿದೆವು. ಜೋರ್ಡನ್ ಕಣಿವೆಯಿಂದ ಏಲತ್ ಮತ್ತು ಎಚ್ಯೋನ್ಗೆಬೆರ್ ಪಟ್ಟಣಗಳಿಗೆ ಹೋಗುವ ಮಾರ್ಗವನ್ನು ಬಿಟ್ಟು, ನಾವು ಮೋವಾಬ್ ದೇಶದ ಮರುಭೂಮಿಗೆ ಹೋಗುವ ರಸ್ತೆಯಲ್ಲಿ ನಡೆದೆವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದಕಾರಣ ನಾವು ಸೇಯೀರಿನಲ್ಲಿರುವ ನಮ್ಮ ಬಂಧುಗಳಾದ ಏಸಾವ್ಯರಿಗೆ ಗೊತ್ತಾಗದಂತೆ ಎಚ್ಚರಿಕೆಯಿಂದ ಅರಾಬದ ಮಾರ್ಗವನ್ನು ಬಿಟ್ಟು ಏಲತ್ ಮತ್ತು ಎಚ್ಯೋನ್ ಗೆಬೆರ್ ಎಂಬ ಪಟ್ಟಣಗಳಿಂದ ಪ್ರಯಾಣಮಾಡಿ ಮೋವಾಬ್ಯರ ಅಡವಿಯ ದಾರಿಯಲ್ಲಿ ನಡೆದೆವು.
Kannada BSI Bible 2016
ಈ ಪ್ರಕಾರ ನಾವು ಸೇಯಾರಿನಲ್ಲಿ ವಾಸಮಾಡುವ ನಮ್ಮ ಸಹೋದರರಾದ ಏಸಾವನ ಮಕ್ಕಳ ಕಡೆಯಿಂದ ಬೈಲಿನ ಮಾರ್ಗವಾಗಿ ಏಲತ್, ಎಚ್ಯೋನ್ಗೆಬೆರ್ ಎಂಬ ಪಟ್ಟಣಗಳ ಮುಂದಾಗಿ ದಾಟಿ ತಿರುಗಿಕೊಂಡು ಮೋವಾಬಿನ ಅರಣ್ಯದ ಮಾರ್ಗವಾಗಿ ಹಾದು ಹೋದೆವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದಕಾರಣ ನಾವು ಸೇಯೀರಿನಲ್ಲಿರುವ ನಮ್ಮ ಬಂಧುಗಳಾದ ಏಸಾವ್ಯರ ಕಡೆಯಿಂದ ಓರೆಯಾಗಿ ತಿರುಗಿಕೊಂಡು ಅರಾಬದ ಮಾರ್ಗವನ್ನು ಬಿಟ್ಟು ಏಲತ್, ಎಚ್ಯೋನ್ಗೆಬೆರ್ ಎಂಬ ಪಟ್ಟಣಗಳಿಂದ ಪ್ರಯಾಣಮಾಡಿ ಮೋವಾಬ್ಯರ ಅಡವಿಯ ದಾರಿಯಲ್ಲಿ ನಡೆದೆವು.
Kannada Bible (KNCL) BSI 2016
“ಆದಕಾರಣ ನಾವು ಸೇಯೀರಿನಲ್ಲಿರುವ ನಮ್ಮ ಬಂಧುಗಳಾದ ಏಸಾವ್ಯರ ಕಡೆಯಿಂದ ಓರೆಯಾಗಿ ಪ್ರಯಾಣಮಾಡಿ ಅರಾಬದ ಮಾರ್ಗವನ್ನು ಬಿಟ್ಟು ಏಲತ್, ಎಚ್ಯೋನ್ಗೆಬೆರ್ ಎಂಬ ಪಟ್ಟಣಗಳಿಂದ ಪ್ರಯಾಣಮಾಡಿ ಮೋವಾಬ್ಯರ ಅಡವಿಯ ದಾರಿಯಲ್ಲಿ ನಡೆದೆವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಪ್ರಕಾರ ನಾವು ಸೇಯೀರಿನಲ್ಲಿ ವಾಸಮಾಡುವ ನಮ್ಮ ಸಹೋದರರಾದ ಏಸಾವನ ಮಕ್ಕಳ ಕಡೆಯಿಂದ ಓರೆಯಾಗಿ ತಿರುಗಿಕೊಂಡು ಅರಾಬಾದ ಮಾರ್ಗವನ್ನು ಬಿಟ್ಟು ಏಲತ್, ಎಚ್ಯೋನ್ ಗೆಬೆರ್ ಎಂಬ ಪಟ್ಟಣಗಳಿಂದ ಪ್ರಯಾಣಮಾಡಿ, ಮೋವಾಬಿನ ಮರುಭೂಮಿಯ ಮಾರ್ಗವಾಗಿ ಹಾದು ಹೋದೆವು.