Deuteronomy 22:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹುಡುಗಿಯ ತಂದೆತಾಯಿಗಳು ಊರಿನ ಹಿರಿಯರ ಮುಂದೆ ಆಕೆಯು ಕನ್ನಿಕೆಯಾಗಿದ್ದಳೆಂದು ರುಜುವಾತುಪಡಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವಳ ತಾಯಿ ತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕವಿಲ್ಲದವಳು ಎಂಬುವುದಕ್ಕೆ ನಿದರ್ಶನವನ್ನು ಊರ ಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು.
Kannada BSI Bible 2016
ಆ ಹುಡುಗಿಯ ತಂದೆಯೂ ತಾಯಿಯೂ ಆ ಹುಡುಗಿಯ ಕನ್ಯಾ ಭಾವದ ಲಕ್ಷಣಗಳನ್ನು ತಕ್ಕೊಂಡು, ಪಟ್ಟಣದ ಹಿರಿಯರ ಮುಂದೆ ಬಾಗಲಿನ ಬಳಿಗೆ ತರಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವಳ ತಾಯಿತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷ ಸಂಪರ್ಕವಿಲ್ಲದವಳು ಎಂಬುದಕ್ಕೆ ನಿದರ್ಶನವನ್ನು ಊರುಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು.
Kannada Bible (KNCL) BSI 2016
ಅವಳ ಮೇಲೆ ಆಪಾದನೆ ತರಬಹುದು. ಅವಳ ತಾಯಿತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷ ಸಂಪರ್ಕ ಇಲ್ಲದವಳು ಎಂಬುದಕ್ಕೆ ಆಧಾರವನ್ನು ಊರಬಾಗಿಲಿಗೆ ಹಿರಿಯರ ಮುಂದೇ ತಂದು ತೋರಿಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವಳ ತಾಯಿ ತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷ ಸಂಪರ್ಕ ಇಲ್ಲದವಳು, ಎಂಬುದಕ್ಕೆ ಆಧಾರವನ್ನು ಊರ ಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು.