Deuteronomy 22:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವನು ನನ್ನ ಮಗಳ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾನೆ. ‘ಆಕೆಯಲ್ಲಿ ಕನ್ನಿಕೆಯ ಗುರುತು ಇರಲಿಲ್ಲ’ ಎಂದು ಹೇಳುತ್ತಿದ್ದಾನೆ, ಆದರೆ ನನ್ನ ಮಗಳು ಮದುವೆಗಿಂತ ಮುಂಚೆ ಪುರುಷ ಸಂಪರ್ಕ ಮಾಡಲಿಲ್ಲವೆಂಬುದಕ್ಕೆ ಇದೇ ಗುರುತು’ ಎಂದು ಹೇಳಿ ರಕ್ತದ ಕಲೆಗಳಿರುವ ಬಟ್ಟೆಯನ್ನು ತೋರಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವನು ಅವಳನ್ನು ದ್ವೇಷಿಸಿ, ಪರಪುರುಷನ ಸಂಪರ್ಕ ಮಾಡಿದವಳೆಂದು ನಿರಾಧಾರವಾದ ಮಾತುಗಳನ್ನಾಡಿ ಅವಳ ಹೆಸರನ್ನು ಅವಮಾನಪಡಿಸುತ್ತಾನೆ. ಇಗೋ ನನ್ನ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳಲ್ಲ ಎಂಬುವುದಕ್ಕೆ ಇದೇ ಪ್ರಮಾಣ” ಎಂದು ಹೇಳಿ ಅವಳ ಹೊದಿಕೆಯನ್ನು ಆ ಊರಿನ ಹಿರಿಯರ ಮುಂದೆ ಇಡಬೇಕು.
Kannada BSI Bible 2016
ಇಗೋ, ಅವನು--ನಿನ್ನ ಮಗಳು ಕನ್ಯಾಸ್ತ್ರೀ ಅಲ್ಲವೆಂದು ಕಂಡೆನೆಂಬದಾಗಿ ಅವಳಿಗೆ ವಿರೋಧವಾದ ಕೆಟ್ಟಮಾತಿಗೆ ಆಸ್ಪದಕೊಟ್ಟಿದ್ದಾನೆ; ಆದರೂ ಇದೆ ನನ್ನ ಮಗಳ ಕನ್ಯಾಭಾವದ ಲಕ್ಷಣಗಳು. ಹೀಗೆ ಅವರು ಪಟ್ಟಣದ ಹಿರಿಯರ ಮುಂದೆ ಬಟ್ಟೆಯನ್ನು ಹಾಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವನು ಅವಳನ್ನು ದ್ವೇಷಿಸಿ ಪರಪುರುಷಸಂಪರ್ಕ ಮಾಡಿದವಳೆಂದು ನಿರಾಧಾರವಾದ ಮಾತುಗಳನ್ನಾಡಿ ಅವಳ ಹೆಸರನ್ನು ಅವಮಾನಪಡಿಸುತ್ತಾನೆ. ಇಗೋ ನನ್ನ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳಲ್ಲವೆಂಬದಕ್ಕೆ ಇದೇ ಪ್ರಮಾಣ ಎಂದು ಹೇಳಿ ಅವಳ ಹಚ್ಚಡವನ್ನು ಹಿರಿಯರ ಮುಂದೆ ಇಡಬೇಕು.
Kannada Bible (KNCL) BSI 2016
ಪರಪುರುಷ ಸಂಪರ್ಕಮಾಡಿದವಳೆಂದು ನಿರಾಧಾರವಾದ ಮಾತುಗಳನ್ನಾಡಿ ಅವಳನ್ನು ಅವಮಾನಪಡಿಸುತ್ತಾನೆ. ಇಗೋ, ನನ್ನ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳಲ್ಲ ಎಂಬುದಕ್ಕೆ ಇದೇ ಪ್ರಮಾಣ’ ಎಂದು ಹೇಳಿ ಅವಳ ಹಚ್ಚಡವನ್ನು ಹಿರಿಯರ ಮುಂದೆ ಇಡಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು, ‘ನಿನ್ನ ಮಗಳು ಕನ್ನಿಕೆಯಲ್ಲವೆಂದು ಕಂಡೆನೆಂಬುದಾಗಿ, ಅವಳಿಗೆ ವಿರೋಧವಾದ ಕೆಟ್ಟ ಮಾತಿಗೆ ಆಸ್ಪದಕೊಟ್ಟಿದ್ದಾನೆ.’ ಆದರೂ ನನ್ನ ಮಗಳ ಕನ್ಯಾಲಕ್ಷಣಕ್ಕೆ ಇದೇ ಪ್ರಮಾಣ,” ಎಂದು ಹೇಳಿ, ಅವರು ಪಟ್ಟಣದ ಹಿರಿಯರ ಮುಂದೆ ಬಟ್ಟೆಯನ್ನು ಹಾಸಬೇಕು.