Deuteronomy 22:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹಿರಿಯರು ಅವನಿಂದ ನಲವತ್ತು ತೊಲೆ ಬೆಳ್ಳಿಯನ್ನು ಹುಡುಗಿಯ ತಂದೆಗೆ ಕೊಡಿಸಬೇಕು. ಯಾಕೆಂದರೆ ಒಬ್ಬ ಇಸ್ರೇಲಿನ ಹುಡುಗಿಗೆ ಅವನು ಅವಮಾನಪಡಿಸಿದ ಕಾರಣ ಆ ಹುಡುಗಿಯು ಅವನ ಹೆಂಡತಿಯಾಗಿಯೇ ಬಾಳಬೇಕು. ಅವನು ಆಕೆಯನ್ನು ಎಂದಿಗೂ ವಿವಾಹವಿಚ್ಛೇದನೆ ಮಾಡಬಾರದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲಳಾದ ಹೆಣ್ಣಿನ ವಿಷಯದಲ್ಲಿ ಆ ಪುರುಷನು ನಿರಾಧಾರವಾದ ತಪ್ಪು ಹೊರಿಸಿದ್ದರಿಂದ, ಅವನಿಗೆ ನೂರು ಶೆಕೆಲ್ ಬೆಳ್ಳಿ ದಂಡವನ್ನು ವಿಧಿಸಿ, ಆ ಹಣವನ್ನು ಅವಳ ತಂದೆಗೆ ಕೊಡಿಸಬೇಕು. ಮತ್ತು ಅವನು ಆ ಸ್ತ್ರೀಯನ್ನು ಹೆಂಡತಿಯನ್ನಾಗಿಯೇ ಇಟ್ಟುಕೊಳ್ಳಬೇಕು; ಅವನ ಜೀವಮಾನಕಾಲವೆಲ್ಲಾ ಅವಳನ್ನು ಪರಿತ್ಯಾಗಮಾಡುವುದಕ್ಕೆ ಅವನಿಗೆ ಅಧಿಕಾರವಿರುವುದಿಲ್ಲ.
Kannada BSI Bible 2016
ಅವನು ಇಸ್ರಾಯೇಲಿನಲ್ಲಿ ಒಬ್ಬ ಕನ್ಯಾ ಸ್ತ್ರೀಯ ಹೆಸರನ್ನು ಕೆಡಿಸಿದ್ದರಿಂದ ಅವನು ಬೆಳ್ಳಿಯ ನೂರು ಹಣಗಳನ್ನು ದಂಡ ತೆಗೆದುಕೊಂಡು ಆ ಹುಡುಗಿಯ ತಂದೆಗೆ ಕೊಡಬೇಕು; ಇದಲ್ಲದೆ ಅವಳು ಅವನಿಗೆ ಹೆಂಡತಿ ಯಾಗಬೇಕು; ಅವನು ಬದುಕುವ ದಿವಸಗಳೆಲ್ಲಾ ಅವಳನ್ನು ಕಳುಹಿಸಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಊರಿನ ಹಿರಿಯರು ಅವನನ್ನು ಹಿಡಿಸಿ ಹೊಡಿಸಿ ನೂರು ರೂಪಾಯಿ ದಂಡವನ್ನು ವಿಧಿಸಿ ಆ ಹಣವನ್ನು ಅವಳ ತಂದೆಗೆ ಕೊಡಿಸಬೇಕು. ಮತ್ತು ಅವನು ಆ ಸ್ತ್ರೀಯನ್ನು ಹೆಂಡತಿಯನ್ನಾಗಿಯೇ ಇಟ್ಟುಕೊಳ್ಳಬೇಕು; ಅವನ ಜೀವಮಾನಕಾಲವೆಲ್ಲಾ ಅವಳನ್ನು ಪರಿತ್ಯಾಗಮಾಡುವದಕ್ಕೆ ಅವನಿಗೆ ಅಧಿಕಾರವಿರುವದಿಲ್ಲ.
Kannada Bible (KNCL) BSI 2016
ಆ ಊರಿನ ಹಿರಿಯರು ಅವನನ್ನು ಹಿಡಿಸಿ, ನೂರು ಬೆಳ್ಳಿ ನಾಣ್ಯದ ದಂಡವನ್ನು ವಿಧಿಸಿ, ಆ ಹಣವನ್ನು ಅವಳ ತಂದೆಗೆ ಕೊಡಿಸಬೇಕು; ಮತ್ತು ಅವನು ಆ ಮಹಿಳೆಯನ್ನು ಹೆಂಡತಿಯನ್ನಾಗಿಯೇ ಇಟ್ಟುಕೊಳ್ಳಬೇಕು; ಅವನ ಜೀವಮಾನಕಾಲವೆಲ್ಲಾ ಅವಳನ್ನು ಪರಿತ್ಯಾಗಮಾಡುವುದಕ್ಕೆ ಅವನಿಗೆ ಅಧಿಕಾರ ಇರುವುದಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಇಸ್ರಾಯೇಲಿನಲ್ಲಿ ಒಬ್ಬ ಕನ್ನಿಕೆಯ ಹೆಸರನ್ನು ಕೆಡಿಸಿದ್ದರಿಂದ, ಅವನಿಗೆ ನೂರು ಬೆಳ್ಳಿ ಶೆಕೆಲ್‌ಗಳ ದಂಡವನ್ನು ವಿಧಿಸಿ, ಅದನ್ನು ಆ ಹುಡುಗಿಯ ತಂದೆಗೆ ಕೊಡಬೇಕು. ಇದಲ್ಲದೆ ಅವಳು ಅವನಿಗೆ ಹೆಂಡತಿಯಾಗಬೇಕು, ಅವನು ಬದುಕಿರುವವರೆಗೆ ಅವಳನ್ನು ಪರಿತ್ಯಾಗಮಾಡಬಾರದು.