Deuteronomy 22:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಹೆಂಗಸು ಗಂಡಸರ ಬಟ್ಟೆ ಧರಿಸಿಕೊಳ್ಳಬಾರದು, ಗಂಡಸು ಹೆಂಗಸರ ಬಟ್ಟೆ ಧರಿಸಬಾರದು. ಇದು ಯೆಹೋವನ ದೃಷ್ಟಿಯಲ್ಲಿ ಅಸಹ್ಯ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸ್ತ್ರೀಯು ಪುರುಷವೇಷವನ್ನಾಗಲಿ ಅಥವಾ ಪುರುಷನು ಸ್ತ್ರೀವೇಷವನ್ನಾಗಲಿ ಹಾಕಿಕೊಳ್ಳಬಾರದು; ಹಾಗೆ ಮಾಡುವವರು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯರು.
Kannada BSI Bible 2016
ಸ್ತ್ರೀಯು ಪುರುಷನ ಉಡಿಗೆ ಉಟ್ಟುಕೊಳ್ಳಬಾರದು; ಪುರುಷನು ಸ್ತ್ರೀ ವಸ್ತ್ರ ಹಾಕಿಕೊಳ್ಳಬಾರದು; ಇವುಗಳನ್ನು ಮಾಡುವವರೆಲ್ಲಾ ಕರ್ತನಿಗೆ ಅಸಹ್ಯ.
Kannada BSI JV (ಕನ್ನಡ ಸತ್ಯವೇದವು J.V. (BSI))
ಸ್ತ್ರೀಯು ಪುರುಷವೇಷವನ್ನೂ ಪುರುಷನು ಸ್ತ್ರೀವೇಷವನ್ನೂ ಹಾಕಿಕೊಳ್ಳಕೂಡದು; ಹಾಗೆ ಮಾಡುವವರು ನಿಮ್ಮ ದೇವರಾದ ಯೆಹೋವನಿಗೆ ಹೇಯರು.
Kannada Bible (KNCL) BSI 2016
“ಹೆಂಗಸರು ಗಂಡಸರಂತೆ, ಗಂಡಸರು ಹೆಂಗಸರಂತೆ ಬಟ್ಟೆ ಹಾಕಬಾರದು; ಹಾಗೆ ಮಾಡುವವರು ನಿಮ್ಮ ದೇವರಾದ ಸರ್ವೇಶ್ವರನಿಗೆ ಹೇಯರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸ್ತ್ರೀಯು ಪುರುಷನ ವಸ್ತ್ರ ಉಟ್ಟುಕೊಳ್ಳಬಾರದು, ಪುರುಷನು ಸ್ತ್ರೀ ವಸ್ತ್ರ ಹಾಕಿಕೊಳ್ಳಬಾರದು. ಏಕೆಂದರೆ ಹೀಗೆ ಮಾಡುವವರೆಲ್ಲ ಯೆಹೋವ ದೇವರಿಗೆ ಅಸಹ್ಯ.