Deuteronomy 23:25 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಒಬ್ಬನ ಧಾನ್ಯದ ಹೊಲದಲ್ಲಿ ನೀವು ಹಾದುಹೋಗುತ್ತಿರುವಾಗ ನಿಮ್ಮ ಕೈಯಿಂದ ಹೊಸೆದು ತಿನ್ನುವಷ್ಟು ಧಾನ್ಯವನ್ನು ನೀವು ತಿನ್ನಬಹುದು; ಆದರೆ ನೀವು ಕತ್ತಿಯಿಂದ ಧಾನ್ಯವನ್ನು ಕೊಯಿದು ನಿಮ್ಮೊಂದಿಗೆ ಒಯ್ಯಬೇಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮತ್ತೊಬ್ಬನ ಪೈರಿನಲ್ಲಿ ಹೋಗುತ್ತಿರುವಾಗ ತೆನೆಗಳನ್ನು ಕೈಯಿಂದ ಮುರಿದುಕೊಳ್ಳಬಹುದೇ ಹೊರತು ಆ ಪೈರಿಗೆ ಕುಡುಗೋಲು ಹಾಕಬಾರದು.
Kannada BSI Bible 2016
ಆದರೆ ನಿನ್ನ ಚೀಲದಲ್ಲಿ ಹಾಕಬಾರದು. ನಿನ್ನ ನೆರೆಯವನ ಪೈರಿಗೆ ಬಂದರೆಕೈಯಿಂದ ತೆನೆಗಳನ್ನು ಕೀಳಬಹುದು. ಆದರೆ ನಿನ್ನ ನೆರೆಯವನ ಪೈರಿನಲ್ಲಿ ಕುಡುಗೋಲಾಡಿಸಬೇಡ.
Kannada BSI JV (ಕನ್ನಡ ಸತ್ಯವೇದವು J.V. (BSI))
ಮತ್ತೊಬ್ಬನ ಪೈರಿನಲ್ಲಿ ಹೋಗುತ್ತಿರುವಾಗ ತೆನೆಗಳನ್ನು ಕೈಯಿಂದ ಮುರುಕೊಳ್ಳಬಹುದೇ ಹೊರತು ಆ ಪೈರಿಗೆ ಕುಡುಗೋಲು ಹಾಕಬಾರದು.
Kannada Bible (KNCL) BSI 2016
ಮತ್ತೊಬ್ಬನ ಬೆಳೆಯ ನಡುವೆ ಹಾದುಹೋಗುವಾಗ ತೆನೆಗಳನ್ನು ಕೈಯಿಂದ ಮುರಿದುಕೊಳ್ಳಬಹುದು; ಆದರೆ ಆ ಬೆಳೆಗೆ ಕುಡುಗೋಲು ಹಾಕಬಾರದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನ್ನ ನೆರೆಯವನ ಪೈರಿನ ಬಳಿಗೆ ಹಾದುಹೋಗುವಾಗ, ಕೈಯಿಂದ ತೆನೆಗಳನ್ನು ಕೀಳಬಹುದು. ಆದರೆ ನಿನ್ನ ನೆರೆಯವನ ಪೈರಿನಲ್ಲಿ ಕುಡುಗೋಲು ಹಾಕಿ ಕೊಯ್ಯಬಾರದು.