Deuteronomy 25:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಮಾಲೇಕ್ಯರು ದೇವರನ್ನು ಗೌರವಿಸಲಿಲ್ಲ. ನೀವು ಆಯಾಸಗೊಂಡು ಬಲಹೀನರಾಗಿದ್ದಾಗ ಅವರು ನಿಮ್ಮ ಮೇಲೆ ಬಿದ್ದರು. ನಿಮ್ಮ ಗುಂಪಿನಲ್ಲಿ ಹಿಂದೆ ಉಳಿದವರನ್ನೆಲ್ಲಾ ಕೊಂದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ದೇವರಲ್ಲಿ ಸ್ವಲ್ಪವೂ ಭಯಭಕ್ತಿಯಿಲ್ಲದವರಾಗಿ, ನೀವು ದಣಿದು ಮತ್ತು ಬಳಲಿದಾಗ ನಿಮ್ಮವರಲ್ಲಿ ಹಿಂದೆಬಿದ್ದ ಬಲಹೀನರನ್ನು ಸಂಹಾರ ಮಾಡಿದರು.
Kannada BSI Bible 2016
ಅವನು ಮಾರ್ಗದಲ್ಲಿ ನಿನಗೆ ಎದುರು ಗೊಂಡು ದೇವರಿಗೆ ಭಯಪಡದೆ ನೀನು ಆಯಾಸವುಳ್ಳ ವನೂ ದಣಿದವನೂ ಆಗಿರುವ ಸಮಯದಲ್ಲಿ ನಿನ್ನ ಹಿಂದೆ ಬಿದ್ದ ಬಲಹೀನರೆಲ್ಲರನ್ನು ನಿನ್ನ ಹಿಂಭಾಗದಲ್ಲಿ ಸಂಹಾರಮಾಡಿದನು.ಆದದರಿಂದ ನಿನ್ನ ದೇವರಾದ ಕರ್ತನು ನಿನಗೆ ವಶಮಾಡಿಕೊಳ್ಳುವದಕ್ಕೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಸುತ್ತಲಾಗಿರುವ ಶತ್ರುಗಳಿಂದ ನಿನ್ನ ದೇವರಾದ ಕರ್ತನು ನಿನ್ನನ್ನು ಬಿಡಿಸಿ ವಿಶ್ರಾಂತಿ ಕೊಟ್ಟ ಮೇಲೆ ಆಮಾಲೇಕ್ಯನ ಜ್ಞಾಪಕವನ್ನು ಆಕಾಶದ ಕೆಳಗಿಂದ ಅಳಿಸಿಬಿಡಬೇಕು; ಇದನ್ನು ಮರೆಯಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ದೇವರಲ್ಲಿ ಸ್ವಲ್ಪವೂ ಭಯಭಕ್ತಿಯಿಲ್ಲದವರಾಗಿ ನೀವು ದಣಿದು ಬಳಲಿ ಇದ್ದಾಗ ನಿಮ್ಮವರಲ್ಲಿ ಹಿಂದೆಬಿದ್ದ ಬಲಹೀನರನ್ನು ಸಂಹಾರ ಮಾಡಿದರಲ್ಲಾ.
Kannada Bible (KNCL) BSI 2016
ಅವರು ದೇವರಲ್ಲಿ ಸ್ವಲ್ಪವೂ ಭಯಭಕ್ತಿಯಿಲ್ಲದವರು; ನೀವು ದಣಿದು ಬಳಲಿದ್ದಾಗ ನಿಮ್ಮವರಲ್ಲಿ ಹಿಂದೆಬಿದ್ದ ಬಲಹೀನರನ್ನು ಸಂಹಾರಮಾಡಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಮಾರ್ಗದಲ್ಲಿ ನಿಮಗೆ ಎದುರುಗೊಂಡು, ನೀವು ಆಯಾಸವುಳ್ಳವರಾಗಿಯೂ, ದಣಿದವರಾಗಿಯೂ ಇದ್ದ ಸಮಯದಲ್ಲಿ ನಿಮ್ಮ ಹಿಂದೆ ಇದ್ದ ಬಲಹೀನರೆಲ್ಲರನ್ನು ಹಿಂಭಾಗದಲ್ಲಿ ಸಂಹಾರ ಮಾಡಿದರು. ಅವರಿಗೆ ದೇವರ ಬಗ್ಗೆ ಯಾವ ಭಯವೂ ಇರಲಿಲ್ಲ.