Deuteronomy 26:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ನಿಮ್ಮ ದೇವರೆಂದು ನೀವು ಈ ದಿನ ಪ್ರತಿಜ್ಞೆ ಮಾಡಿದ್ದೀರಿ. ಆತನು ಹೇಳಿದ ಎಲ್ಲಾ ಕಟ್ಟಳೆ, ವಿಧಿ, ನಿಯಮಗಳನ್ನು ಅನುಸರಿಸುವಿರೆಂದು ಪ್ರತಿಜ್ಞೆ ಮಾಡಿರುತ್ತೀರಿ. ಆತನು ಹೇಳಿದ್ದನ್ನೆಲ್ಲಾ ಮಾಡುವುದಾಗಿ ಹೇಳಿರುವಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಮಗೆ ಯೆಹೋವನೇ ದೇವರಾಗಿರುವನೆಂದೂ, ಆತನು ಹೇಳಿದ ಮಾರ್ಗದಲ್ಲೇ ನಡೆದು ಆತನ ಆಜ್ಞಾವಿಧಿನಿಯಮಗಳನ್ನು ಕೈಕೊಂಡು, ಆತನ ಮಾತಿಗೆ ಲಕ್ಷ್ಯವಿಡುವೆವು ಎಂದು ನೀವು ಈಗ ಒಡಂಬಟ್ಟಿದ್ದೀರಿ.
Kannada BSI Bible 2016
ನೀನು ಈಹೊತ್ತು ಕರ್ತನು--ನಿನಗೆ ದೇವರಾಗಬೇಕೆಂದೂ ಆತನ ಮಾರ್ಗಗಳಲ್ಲಿ ನಡೆದು ಆತನ ನಿಯಮ ಆಜ್ಞೆ ನ್ಯಾಯಗಳನ್ನು ಕಾಪಾಡಿ ಆತನ ಸ್ವರ ಕೇಳುತ್ತೇನೆಂದೂ ದೃಢವಾಗಿ ಹೇಳಿದಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಮಗೆ ಯೆಹೋವನೇ ದೇವರಾಗಿರುವನೆಂದೂ ಆತನು ಹೇಳಿದ ಮಾರ್ಗದಲ್ಲೇ ನಡೆದು ಆತನ ಆಜ್ಞಾವಿಧಿನಿರ್ಣಯಗಳನ್ನು ಕೈಕೊಂಡು ಆತನ ಮಾತಿಗೆ ಲಕ್ಷ್ಯವಿಡುವೆವೆಂದೂ ನೀವು ಈಗ ಒಡಂಬಟ್ಟಿದ್ದೀರಿ.
Kannada Bible (KNCL) BSI 2016
ನಮಗೆ ಸರ್ವೇಶ್ವರನೇ ದೇವರಾಗಿರುವರೆಂದು ಹಾಗು ಅವರು ಹೇಳಿದ ಮಾರ್ಗದಲ್ಲೇ ನಡೆದು ಅವರ ಆಜ್ಞಾವಿಧಿನಿರ್ಣಯಗಳನ್ನು ಕೈಕೊಂಡು ಅವರ ಮಾತಿಗೆ ಲಕ್ಷ್ಯಕೊಡುವೆವೆಂದೂ ನೀವು ಈಗ ಒಡಂಬಟ್ಟಿದ್ದೀರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಈ ಹೊತ್ತು, ಯೆಹೋವ ದೇವರೇ ನಮಗೆ ದೇವರು ಎಂದೂ, ಅವರ ಮಾರ್ಗಗಳಲ್ಲಿ ನಡೆದು, ಅವರು ಹೇಳಿದ ಆಜ್ಞಾವಿಧಿನಿಯಮಗಳನ್ನು ಪಾಲಿಸಿ, ಅವರ ಮಾತಿಗೆ ವಿಧೇಯರಾಗಿರುತ್ತೇವೆ ಎಂದೂ ದೃಢವಾಗಿ ಹೇಳಿದ್ದೀರಿ.