Deuteronomy 27:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಲೇವಿಯರು, ‘ತಂದೆಯ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಂಡವನು ಶಾಪಗ್ರಸ್ತನಾಗಲಿ. ಅವನು ತನ್ನ ತಂದೆಗೆ ಅವಮಾನ ಮಾಡಿದನು’ ಎಂದು ಹೇಳಬೇಕು. “ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಅವರು, ಮಲತಾಯಿಯನ್ನು ಸಂಗಮಿಸಿ ತಂದೆಗೆ ಅವಮಾನಪಡಿಸಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
Kannada BSI Bible 2016
ತನ್ನ ತಂದೆಯ ಹೆಂಡತಿಯ ಸಂಗಡ ಮಲಗಿ ತನ್ನ ತಂದೆಯ ವಸ್ತ್ರದ ಸೆರಗನ್ನು ತೆರೆದವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು - ಮಲತಾಯಿಯನ್ನು ಸಂಗವಿುಸಿ ತಂದೆಗೆ ಅವಮಾನಪಡಿಸಿದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು.
Kannada Bible (KNCL) BSI 2016
‘ಅವರು, ‘ಮಲತಾಯಿಯನ್ನು ಸಂಗಮಿಸಿ ತಂದೆಗೆ ಅವಮಾನಪಡಿಸಿದವನು ಶಾಪಗ್ರಸ್ತ,’ ಎನ್ನಲು ಜನರೆಲ್ಲರು, ‘ಆಮೆನ್’, ಎನ್ನಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು, “ಮಲತಾಯಿಯ ಸಂಗಡ ಅನೈತಿಕವಾಗಿ ನಡೆದು ತನ್ನ ತಂದೆಯ ಹಾಸಿಗೆಯನ್ನು ಅವಮಾನಪಡಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.