Deuteronomy 28:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ನೀವು ಕೆಟ್ಟಕಾರ್ಯಗಳನ್ನು ಮಾಡಿ ಯೆಹೋವನಿಂದ ದೂರವಾಗಿ ಹೋದರೆ ನಿಮಗೆ ಕೆಟ್ಟಸಂಗತಿಗಳು ಉಂಟಾಗುವವು. ನಿಮಗೆ ಉಪದ್ರವಗಳೂ ಮನಸ್ಸಿಗೆ ಅಸಮಾಧಾನವೂ ಉಂಟಾಗುವವು. ನೀವು ಸಂಪೂರ್ಣವಾಗಿ ನಾಶವಾಗುವ ತನಕ ಈ ಸಂಗತಿಗಳು ನಿಮ್ಮನ್ನು ಬಾಧಿಸುವವು. ನೀವು ಆತನನ್ನು ತೊರೆದದ್ದರಿಂದ ನಿಮಗೆ ಹಾಗೆ ಮಾಡುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ದುರ್ನಡತೆಯುಳ್ಳವರಾಗಿ ಯೆಹೋವನನ್ನು ಬಿಟ್ಟಿದ್ದರಿಂದ ಆತನು ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿಯೂ ವಿಪತ್ತು, ಕಳವಳ, ಶಾಪ ಇವುಗಳನ್ನು ಉಂಟುಮಾಡುತ್ತಾ ನಿಮ್ಮನ್ನು ಬೇಗನೆ ನಾಶಮಾಡುವನು.
Kannada BSI Bible 2016
ನೀನು ನನ್ನನ್ನು ಬಿಟ್ಟು ನಿನ್ನ ದುಷ್ಕ್ರಿಯೆಗಳ ಕೆಟ್ಟತ ನದ ನಿಮಿತ್ತ ನೀನು ನಾಶವಾಗುವ ವರೆಗೂ ಶೀಘ್ರ ವಾಗಿ ಕೆಟ್ಟುಹೋಗುವ ವರೆಗೂ ನೀನು ಮಾಡುವ ಎಲ್ಲಾ ಕೈಕೆಲಸದಲ್ಲಿ ಶಾಪವನ್ನೂ ಗಾಬರಿಯನ್ನೂ ಗದರಿಕೆಯನ್ನೂ ಕರ್ತನು ನಿನ್ನ ಮೇಲೆ ಕಳುಹಿಸುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ದುರ್ನಡತೆಯುಳ್ಳವರಾಗಿ ಯೆಹೋವನನ್ನು ಬಿಟ್ಟದ್ದರಿಂದ ಆತನು ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿಯೂ ವಿಪತ್ತು, ಕಳವಳ, ಶಾಪ ಇವುಗಳನ್ನುಂಟುಮಾಡುತ್ತಾ ನಿಮ್ಮನ್ನು ಬೇಗನೆ ನಾಶಮಾಡುವನು.
Kannada Bible (KNCL) BSI 2016
“ನೀವು ದುರ್ನಡತೆಯುಳ್ಳವರಾಗಿ ಸರ್ವೇಶ್ವರನನ್ನು ಬಿಟ್ಟದ್ದರಿಂದ ಅವರು ನಿಮ್ಮ ಎಲ್ಲ ಪ್ರಯತ್ನಗಳಲ್ಲೂ ವಿಪತ್ತು, ಕಳವಳ, ಶಾಪ, ಇವುಗಳನ್ನುಂಟುಮಾಡುತ್ತಾ ನಿಮ್ಮನ್ನು ಬೇಗನೆ ನಾಶಮಾಡುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ನಿಮ್ಮ ಯೆಹೋವ ದೇವರನ್ನು ಬಿಟ್ಟ ದುಷ್ಟಕ್ರಿಯೆಯ ನಿಮಿತ್ತ, ಯೆಹೋವ ದೇವರು ನೀವು ಬೇಗ ನಾಶವಾಗುವವರೆಗೂ ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ನಿಮಗೆ ಶಾಪ, ಗಲಿಬಿಲಿ ಹಾಗು ಗದರಿಕೆ ಮುಂತಾದವುಗಳನ್ನು ಉಂಟುಮಾಡುವರು.