Deuteronomy 28:29 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಹಗಲಿನಲ್ಲೂ ಕುರುಡರಂತೆ ನೀವು ತಡವರಿಸುವಿರಿ. ನೀವು ಮಾಡುವ ಕಾರ್ಯವೆಲ್ಲವೂ ನಿಷ್ಫಲವಾಗುವವು. ಜನರು ನಿಮ್ಮನ್ನು ಬಾಧಿಸಿ ನಿಮ್ಮಲ್ಲಿರುವದನ್ನೆಲ್ಲಾ ದೋಚಿಕೊಂಡು ಹೋಗುವರು. ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ಕುರುಡರಂತೆ ಮಧ್ಯಾಹ್ನದಲ್ಲಿಯೂ ಕತ್ತಲಾಯಿತೆಂದು ತಡವರಿಸುತ್ತಾ ಇರುವಿರಿ; ನೀವು ಮಾಡುವ ಯಾವ ಕೆಲಸವೂ ಕೈಗೂಡುವುದಿಲ್ಲ. ಅನ್ಯರು ಯಾವಾಗಲೂ ನಿಮ್ಮನ್ನು ಪೀಡಿಸುತ್ತಾ ನಿಮ್ಮ ಸೊತ್ತನ್ನು ಸೂರೆಮಾಡುತ್ತಾ ಇರುವರು; ತಪ್ಪಿಸುವವರು ಯಾರೂ ಇರುವುದಿಲ್ಲ.
Kannada BSI Bible 2016
ಕುರುಡನು ಕತ್ತಲಲ್ಲಿ ತಡವರಿಸು ವಂತೆ ಮಧ್ಯಾಹ್ನದಲ್ಲಿ ತಡವರಿಸುತ್ತಾ ಇರುವಿ; ನಿನ್ನ ಮಾರ್ಗಗಳಲ್ಲಿ ಸಫಲವಾಗುವದಿಲ್ಲ; ನೀನು ಯಾವಾ ಗಲೂ ರಕ್ಷಿಸುವವನಿಲ್ಲದೆ ಬಲಾತ್ಕಾರವನ್ನೂ ಸುಲಿಗೆ ಯನ್ನೂ ಅನುಭವಿಸುವವನಾಗುವಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಕುರುಡರಂತೆ ಮಧ್ಯಾಹ್ನದಲ್ಲಿಯೂ ಕತ್ತಲಾಯಿತೆಂದು ತಡವರಿಸುತ್ತಾ ಇರುವಿರಿ; ನೀವು ಮಾಡುವ ಯಾವ ಕೆಲಸವೂ ಕೈಗೂಡುವದಿಲ್ಲ. ಅನ್ಯರು ಯಾವಾಗಲೂ ನಿಮ್ಮನ್ನು ಪೀಡಿಸುತ್ತಾ ನಿಮ್ಮ ಸೊತ್ತನ್ನು ಸೂರೆಮಾಡುತ್ತಾ ಇರುವರು; ತಪ್ಪಿಸುವವರು ಯಾರೂ ಇರುವದಿಲ್ಲ.
Kannada Bible (KNCL) BSI 2016
ಕುರುಡರಂತೆ ನಡುಮಧ್ಯಾಹ್ನದಲ್ಲೂ ಕತ್ತಲಾಯಿತೆಂದು ನೀವು ತಡವರಿಸುವಿರಿ; ನೀವು ಮಾಡುವ ಕೆಲಸ ಯಾವುದೂ ಕೈಗೂಡುವುದಿಲ್ಲ. ಅನ್ಯರು ನಿಮ್ಮನ್ನು ನಿರಂತರವಾಗಿ ಪೀಡಿಸುತ್ತಾ ನಿಮ್ಮ ಸೊತ್ತನ್ನು ಸೂರೆಮಾಡುತ್ತಾ ಇರುವರು. ನಿಮಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕಣ್ಣು ಕಾಣದವನು ಕತ್ತಲಲ್ಲಿ ತಡವಾಡುವಂತೆ ಮಧ್ಯಾಹ್ನದಲ್ಲಿ ತಡವಾಡುತ್ತಾ ಇರುವಿರಿ, ನಿಮ್ಮ ಮಾರ್ಗಗಳಲ್ಲಿ ಸಫಲವಾಗುವುದಿಲ್ಲ. ನೀವು ಯಾವಾಗಲೂ ರಕ್ಷಿಸುವವನಿಲ್ಲದೆ ಬಲಾತ್ಕಾರವನ್ನೂ, ಸುಲಿಗೆಯನ್ನೂ ಅನುಭವಿಸುವವರಾಗುವಿರಿ.