Deuteronomy 28:48 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ಆತನು ನಿಮ್ಮ ವೈರಿಗಳನ್ನು ಕಳುಹಿಸಿ ಅವರ ಸೇವೆ ನೀವು ಮಾಡುವಂತೆ ಮಾಡುವನು. ನೀವು ಹಸಿವು ಬಾಯಾರಿಕೆಗಳಿಂದ ಬಳಲುವಿರಿ; ಬಟ್ಟೆಯಿಲ್ಲದೆ ಬಡವರಾಗಿ ಜೀವಿಸುವಿರಿ. ನಿಮ್ಮ ಯೆಹೋವನು ನಿಮ್ಮ ಮೇಲೆ ಭಾರವನ್ನು ಹೊರಿಸುವನು. ಆ ಭಾರವನ್ನು ನಿಮ್ಮಿಂದ ತೆಗೆಯಲಾಗುವುದಿಲ್ಲ; ನೀವು ನಾಶವಾಗುವಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ನಿಮ್ಮ ಮೇಲೆ ಶತ್ರುಗಳನ್ನು ಬರಮಾಡುವನು; ಆಗ ನೀವು ಹಸಿವೆ, ಬಾಯಾರಿಕೆಗಳುಳ್ಳವರಾಗಿ, ಬಟ್ಟೆಯೂ ಮತ್ತು ಏನೂ ಇಲ್ಲದವರಾಗಿ ಆ ಶತ್ರುಗಳಿಗೇ ಸೇವಕರಾಗಬೇಕಾಗುವುದು. ಯೆಹೋವನು ಕಬ್ಬಿಣದ ನೊಗವನ್ನು ಹೇರಿಸಿ ನಿಮ್ಮನ್ನು ನಾಶಮಾಡುವನು.
Kannada BSI Bible 2016
ಹಸಿವೆಯಲ್ಲಿ, ದಾಹದಲ್ಲಿ, ಬೆತ್ತಲೆಯಲ್ಲಿ, ಎಲ್ಲವುಗಳ ಕೊರತೆಯಲ್ಲಿ ದೇವರು ನಿನ್ನ ಮೇಲೆ ಕಳುಹಿಸುವ ನಿನ್ನ ಶತ್ರುಗಳನ್ನು ಸೇವಿಸಬೇಕು; ಆತನು ನಿನ್ನನ್ನು ನಾಶಮಾಡುವ ವರೆಗೆ ಕಬ್ಬಿಣದ ನೊಗವನ್ನು ನಿನ್ನ ಕುತ್ತಿಗೆಯ ಮೇಲೆ ಹೊರಿ ಸುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ನೀವು ಹಸಿವು ಬಾಯಾರಿಕೆಗಳುಳ್ಳವರಾಗಿ ಬಟ್ಟೆಯೂ ಏನೂ ಇಲ್ಲದೆ ಆ ಶತ್ರುಗಳಿಗೇ ಸೇವಕರಾಗಬೇಕಾಗುವದು. ಆತನು ಕಬ್ಬಿಣದ ನೊಗವನ್ನು ಹೇರಿಸಿ ನಿಮ್ಮನ್ನು ನಾಶಮಾಡುವನು.
Kannada Bible (KNCL) BSI 2016
ಆದುದರಿಂದ ಸರ್ವೇಶ್ವರ ನಿಮ್ಮ ಮೇಲೆ ಶತ್ರುಗಳನ್ನು ಬರಮಾಡುವರು; ಆಗ ನೀವು ಹಸಿವು ಬಾಯಾರಿಕೆಗಳಿಗೆ ಗುರಿಯಾಗಿ ಬಟ್ಟೆಬರೆ ಏನೂ ಇಲ್ಲದೆ, ಆ ಶತ್ರುಗಳಿಗೇ ಸೇವಕರಾಗಬೇಕಾಗುವುದು. ಕಬ್ಬಿಣದ ನೊಗವನ್ನು ಹೇರಿಸಿ ಸರ್ವೇಶ್ವರ ನಿಮ್ಮನ್ನು ನಾಶಮಾಡುವರು;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದುದರಿಂದ ಹಸಿವೆಯಲ್ಲಿ, ದಾಹದಲ್ಲಿ, ಬಡತನದಲ್ಲಿ ಬಟ್ಟೆಬರೆ ಏನೂ ಇಲ್ಲದೆ, ಯೆಹೋವ ದೇವರು ನಿಮ್ಮ ಮೇಲೆ ಕಳುಹಿಸುವ ಆ ಶತ್ರುಗಳಿಗೇ ನೀವು ಸೇವಕರಾಗಬೇಕಾಗುವುದು. ಯೆಹೋವ ದೇವರು ನಿಮ್ಮನ್ನು ನಾಶಮಾಡುವವರೆಗೆ ಕಬ್ಬಿಣದ ನೊಗವನ್ನು ನಿಮ್ಮ ಮೇಲೆ ಹೊರಿಸುವರು.