Deuteronomy 28:59 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿಮಗೂ ನಿಮ್ಮ ಸಂತತಿಯವರಿಗೂ ಅನೇಕ ತೊಂದರೆಗಳನ್ನು ಕೊಡುವನು. ಆ ತೊಂದರೆಗಳು ಮತ್ತು ರೋಗಗಳು ಭಯಂಕರವಾಗಿವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆತನು ನಿಮಗೂ, ನಿಮ್ಮ ಸಂತತಿಯವರಿಗೂ ದೀರ್ಘಕಾಲವಿರುವ ಬಹುಭಯಂಕರವಾದ ಉಪದ್ರವಗಳನ್ನು ಬರಮಾಡುವನು. ಬಹುಕಾಲದವರೆಗೂ ವಾಸಿಯಾಗದ ಘೋರ ವ್ಯಾಧಿಗಳಿಂದ ನಿಮ್ಮನ್ನು ಬಾಧಿಸುವನು.
Kannada BSI Bible 2016
ಕರ್ತನು ನಿನ್ನ ಬಾಧೆಗಳನ್ನೂ ನಿನ್ನ ಸಂತತಿಯ ಬಾಧೆಗಳನ್ನೂ ಆಶ್ಚರ್ಯವಾಗ ಮಾಡುವನು; ಅವು ದೊಡ್ಡದಾದ ಮತ್ತು ಸ್ಥಿರವಾದ ಬಾಧೆಗಳೂ ಘೋರ ವಾದ ಮತ್ತು ಸ್ಥಿರವಾದ ರೋಗಗಳೂ ಆಗುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನು ನಿಮಗೂ ನಿಮ್ಮ ಸಂತತಿಯವರಿಗೂ ದೀರ್ಘಕಾಲವಿರುವ ಬಹುವಿಶೇಷವಾದ ಉಪದ್ರವಗಳನ್ನು ಬರಮಾಡುವನು. ಬಹುಕಾಲದವರೆಗೂ ವಾಸಿಯಾಗದ ಘೋರ ವ್ಯಾಧಿಗಳಿಂದ ನಿಮ್ಮನ್ನು ಬಾಧಿಸುವನು.
Kannada Bible (KNCL) BSI 2016
ಅವರು ನಿಮಗೂ ನಿಮ್ಮ ಸಂತತಿಯವರಿಗೂ ದೀರ್ಘಕಾಲವಿರುವ ಬಹುಭಯಂಕರವಾದ ಉಪದ್ರವಗಳನ್ನು ಬರಮಾಡುವರು. ದೀರ್ಘಕಾಲ ವಾಸಿಯಾಗದ ಘೋರವ್ಯಾಧಿಗಳಿಂದ ನಿಮ್ಮನ್ನು ಬಾಧಿಸುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ನಿಮಗೂ ನಿಮ್ಮ ಸಂತತಿಗೂ ಭಯಂಕರವಾದ ಉಪದ್ರವಗಳನ್ನು ಬರಮಾಡುವರು; ಅವು ಕಠಿಣವಾದ ಮತ್ತು ದೀರ್ಘಕಾಲದ ಬಾಧೆಗಳೂ ಘೋರವಾದ ಮತ್ತು ಗಂಭೀರವಾದ ರೋಗಗಳಾಗಿರುವವು.