Deuteronomy 29:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿಮ್ಮ ದೇಶವೆಲ್ಲಾ ನಿಷ್ಪ್ರಯೋಜಕವಾಗಿರುವುದು. ಅದರ ಮೇಲೆ ಉಪ್ಪೂ ಗಂಧಕವೂ ತುಂಬಿರುವುದು. ಅದರ ಮೇಲೆ ಯಾವ ಸಸಿಯೂ ಬೆಳೆಯಲಾರದು; ಕೂಳೆಯೂ ಬೆಳೆಯುವುದಿಲ್ಲ. ಸೊದೋಮ್, ಗೊಮೋರ, ಅದ್ಮಾ ಮತ್ತು ಚೆಬೋಯೀಮ್ ಎಂಬ ಪಟ್ಟಣಗಳು ಯೆಹೋವನ ಕೋಪದ ನಿಮಿತ್ತ ನಾಶವಾದಂತೆ ನಿಮ್ಮ ದೇಶವೂ ನಾಶವಾಗುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎಲ್ಲಾ ಜನಾಂಗಗಳವರೂ ನಿಮ್ಮ ದೇಶವು ಯಾವ ವ್ಯವಸಾಯವೂ ಇಲ್ಲದೆ, ಹುಲ್ಲಾದರೂ ಬೆಳೆಯದೆ, ಹಾಳುಬಿದ್ದಿರುವುದನ್ನು ಕಾಣುವರು. ಯೆಹೋವನು ಕೋಪ ಮತ್ತು ರೋಷದಿಂದ ಕೆಡವಿದ ಸೊದೋಮ್ ಮತ್ತು ಗೊಮೋರ, ಅದ್ಮಾ ಮತ್ತು ಚೆಬೋಯಿಮ್ ಎಂಬ ಪಟ್ಟಣಗಳ ಪ್ರದೇಶದಂತೆ ಸುಟ್ಟು ಹೋಗಿ, ಎಲ್ಲಾ ಕಡೆಗಳಲ್ಲಿಯೂ ಗಂಧಕ ಉಪ್ಪುಗಳಿಂದ ತುಂಬಿರುವುದನ್ನು ಕಂಡು,
Kannada BSI Bible 2016
ಕರ್ತನು ತನ್ನ ಕೋಪದಲ್ಲಿಯೂ ರೌದ್ರದಲ್ಲಿಯೂ ಕೆಡವಿ ಹಾಕಿದ ಸೊದೋಮ್‌ ಗೊಮೋರ ಅದ್ಮಾಚೆಬೋ ಯಾಮ್‌ ಇವುಗಳ ಹಾಗೆ ಆ ದೇಶವೆಲ್ಲಾ ಗಂಧಕವೂ ಉಪ್ಪೂ ಉರಿಯುತ್ತಾ ಬಿತ್ತಲ್ಪಡದೆ ಮೊಳೆಯದೆ ಯಾವ ಹುಲ್ಲನ್ನಾದರೂ ಬೆಳೆಸದೆ ಇರುವದನ್ನು ನೋಡಿ--
Kannada BSI JV (ಕನ್ನಡ ಸತ್ಯವೇದವು J.V. (BSI))
ಎಲ್ಲಾ ಜನಾಂಗಗಳವರೂ ನಿಮ್ಮ ಆ ದೇಶವು ಯಾವ ವ್ಯವಸಾಯವಾದರೂ ಇಲ್ಲದೆ ಹುಲ್ಲಾದರೂ ಬೆಳೆಯದೆ ಹಾಳುಬಿದ್ದು ಯೆಹೋವನು ಮಹಾ ಕೋಪದಿಂದ ಕೆಡವಿದ ಸೊದೋಮ್ ಗೊಮೋರ ಅದ್ಮಾ ಚೆಬೋಯೀಮ್ ಎಂಬ ಪಟ್ಟಣಗಳ ಪ್ರದೇಶದಂತೆ ಸುಟ್ಟುಹೋದದ್ದಾಗಿ ಎಲ್ಲಾ ಕಡೆಗಳಲ್ಲಿಯೂ ಗಂಧಕ ಉಪ್ಪುಗಳಿಂದ ತುಂಬಿರುವದನ್ನು ಕಂಡು -
Kannada Bible (KNCL) BSI 2016
ಎಲ್ಲ ಜನಾಂಗಗಳವರೂ ನಿಮ್ಮ ಆ ನಾಡು ಯಾವ ವ್ಯವಸಾಯವೂ ಇಲ್ಲದೆ, ಹುಲ್ಲಾದರೂ ಬೆಳೆಯದೆ, ಹಾಳುಬಿದ್ದಿರುವುದನ್ನು ನೋಡುವರು. ಸರ್ವೇಶ್ವರ ಮಹಾಕೋಪದಿಂದ ಕೆಡವಿದ ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳ ಪ್ರದೇಶದಂತೆ ಸುಟ್ಟುಹೋಗಿರುವುದನ್ನೂ ಎಲ್ಲ ಕಡೆಗಳಲ್ಲೂ ಗಂಧಕ ಉಪ್ಪುಗಳಿಂದ ತುಂಬಿರುವುದನ್ನೂ ನೋಡುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ತಮ್ಮ ದೈವಿಕ ಕೋಪದಲ್ಲಿ ಕೆಡವಿ ಹಾಕಿದ ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಂತೆ ಆ ದೇಶವೆಲ್ಲಾ ಗಂಧಕವೂ, ಉಪ್ಪೂ ಉರಿಯುತ್ತಾ, ವ್ಯವಸಾಯವಾದರೂ ಹುಲ್ಲಾದರೂ ಬೆಳೆಯದೆ ಇರುವುದು.