Deuteronomy 29:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಲವತ್ತು ವರ್ಷಗಳ ತನಕ ಯೆಹೋವನು ನಿಮ್ಮನ್ನು ಅಡವಿಯಲ್ಲಿ ನಡೆಸಿದನು. ಆದರೆ ನಿಮ್ಮ ಬಟ್ಟೆಗಳು ಜೀರ್ಣವಾಗಲಿಲ್ಲ ಮತ್ತು ಕಾಲಿಗೆ ಹಾಕಿದ ಕೆರಗಳು ಸವೆಯಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಲ್ವತ್ತು ವರ್ಷ ನಾನು ನಿಮ್ಮನ್ನು ಅರಣ್ಯದಲ್ಲಿ ನಡೆಸಿಕೊಂಡು ಬಂದಿದ್ದೇನೆ. ನಿಮ್ಮ ಮೈಮೇಲಿದ್ದ ಉಡುಪು ಹರಿಯಲ್ಲಿಲ್ಲ ಅಥವಾ ಕಾಲಿನಲ್ಲಿದ್ದ ಕೆರವಾಗಲಿ ಸವೆದು ಹೋಗಲಿಲ್ಲ;
Kannada BSI Bible 2016
ನಾನು ನಾಲ್ವತ್ತು ವರುಷ ನಿಮ್ಮನ್ನು ಅರಣ್ಯದಲ್ಲಿ ನಡಿಸಿದೆನು; ನಿಮ್ಮ ಮೇಲಿರುವ ವಸ್ತ್ರ ಗಳು ಹಳೇವಾಗಲಿಲ್ಲ; ನಿಮ್ಮ ಪಾದಗಳಲ್ಲಿರುವ ಕೆರಗಳು ಹಳೇವಾಗಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾಲ್ಪತ್ತು ವರುಷ ನಾನು ನಿಮ್ಮನ್ನು ಅರಣ್ಯದಲ್ಲಿ ನಡಿಸಿಕೊಂಡು ಬಂದಿದ್ದೇನೆ. ನಿಮ್ಮ ಮೈಮೇಲಿದ್ದ ಉಡುಪಾಗಲಿ ಕಾಲಲ್ಲಿದ್ದ ಕೆರವಾಗಲಿ ಜೀರ್ಣವಾಗಲಿಲ್ಲ;
Kannada Bible (KNCL) BSI 2016
ನಲವತ್ತು ವರ್ಷ ನಾನು ನಿಮ್ಮನ್ನು ಮರುಭೂಮಿಯಲ್ಲಿ ನಡೆಸಿಕೊಂಡು ಬಂದಿದ್ದೇನೆ. ನಿಮ್ಮ ಮೈಮೇಲಿದ್ದ ಉಡುಪಾಗಲಿ, ಕಾಲಲ್ಲಿದ್ದ ಕೆರವಾಗಲಿ ಸವೆದುಹೋಗಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನಾನು ನಲವತ್ತು ವರ್ಷ ನಿಮ್ಮನ್ನು ಮರುಭೂಮಿಯಲ್ಲಿ ನಡೆಸಿದೆನು. ನಿಮ್ಮ ಮೇಲಿರುವ ವಸ್ತ್ರಗಳು ಹರಿಯಲಿಲ್ಲ. ನಿಮ್ಮ ಪಾದಗಳಲ್ಲಿದ್ದ ಕೆರವಾಗಲಿ ಸವೆದುಹೋಗಲಿಲ್ಲ.