Deuteronomy 3:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನಾವು ನಮ್ಮ ದಾರಿಯಿಂದ ಹಿಂತಿರುಗಿ ಬಾಷಾನಿಗೆ ಹೋಗುವ ದಾರಿಯಲ್ಲಿ ಹೋದೆವು. ಎದ್ರೈಯಲ್ಲಿ ಬಾಷಾನಿನ ಅರಸನಾದ ಓಗನೂ ಅವನ ಸೈನ್ಯವೂ ನಮ್ಮೊಂದಿಗೆ ಯುದ್ಧಮಾಡಲು ಹೊರಟುಬಂದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತರುವಾಯ ನಾವು ಹಿಂದಿರುಗಿ ಬಾಷಾನಿನ ಮಾರ್ಗವನ್ನು ಹಿಡಿದು ಮೇಲಕ್ಕೆ ಹೋದಾಗ ಬಾಷಾನಿನ ಅರಸನಾದ ಓಗನು ತನ್ನ ಜನರೆಲ್ಲರ ಸಮೇತ ನಮಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೆ ಎದ್ರೈ ಊರಿಗೆ ಹೊರಟುಬಂದನು.
Kannada BSI Bible 2016
ಆಗ ನಾವು ತಿರುಗಿಕೊಂಡು ಬಾಷಾನಿನ ಕಡೆಗೆ ಹೊರಟೆವು. ಬಾಷಾನಿನ ಅರಸ ನಾದ ಓಗನು ತನ್ನ ಎಲ್ಲಾ ಜನರ ಸಂಗಡ ನಮ್ಮೆದುರಿಗೆ ಎದ್ರೈಗೆ ಯುದ್ಧಮಾಡುವದಕ್ಕೆ ಹೊರಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ತರುವಾಯ ನಾವು ಹಿಂದಿರುಗಿ ಬಾಷಾನಿನ ಮಾರ್ಗವನ್ನು ಹಿಡಿದು ಹತ್ತಿಹೋಗಲಾಗಿ ಬಾಷಾನಿನ ಅರಸನಾದ ಓಗನು ತನ್ನ ಜನರೆಲ್ಲರ ಸಮೇತ ನಮಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಎದ್ರೈವೂರಿಗೆ ಹೊರಟುಬಂದನು.
Kannada Bible (KNCL) BSI 2016
“ತರುವಾಯ ನಾವು ಹಿಂದಿರುಗಿ ಬಾಷಾನಿನ ಮಾರ್ಗವನ್ನು ಹಿಡಿದು ಹತ್ತಿಹೋದೆವು. ಆಗ ಬಾಷಾನಿನ ಅರಸ ಓಗನು ತನ್ನ ಜನರೆಲ್ಲರ ಸಮೇತ ನಮಗೆ ವಿರುದ್ಧ ಯುದ್ಧಮಾಡುವುದಕ್ಕೆ ಎದ್ರೈವೂರಿಗೆ ಹೊರಟು ಬಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ನಾವು ಹಿಂದಿರುಗಿ ಬಾಷಾನಿನ ಕಡೆಗೆ ಮೇಲಕ್ಕೆ ಹೊರಟೆವು. ಆಗ ಬಾಷಾನಿನ ಅರಸನಾದ ಓಗನು ತನ್ನ ಸಮಸ್ತ ಜನರ ಸಂಗಡ ನಮಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೆ ಎದ್ರೈಗೆ ಹೊರಟುಬಂದನು.