Deuteronomy 3:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
(ಓಗನು ಬಾಷಾನಿನ ರಾಜನಾಗಿದ್ದನು. ಎದ್ರೈ ಮತ್ತು ಸಲ್ಕಾ ಬಾಷಾನಿನಲ್ಲಿದ್ದ ಓಗನ ರಾಜ್ಯದ ಪಟ್ಟಣಗಳಾಗಿದ್ದವು. ಅವನು ರೆಫಾಯರಲ್ಲಿ ಅಳಿದುಳಿದವರಲ್ಲಿ ಒಬ್ಬನಾಗಿದ್ದನು. ಅವನ ಮಂಚವು ಕಬ್ಬಿಣದಿಂದ ಮಾಡಲ್ಪಟ್ಟಿತ್ತು. ಅದು ಹದಿಮೂರು ಅಡಿ ಉದ್ದವಿತ್ತು ಮತ್ತು ಆರು ಅಡಿ ಅಗಲವಿತ್ತು. ಆ ಮಂಚವು ಈಗಲೂ ಅಮ್ಮೋನಿಯರು ವಾಸಿಸುವ ರಬ್ಬಾದಲ್ಲಿದೆ.)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
(ರೆಫಾಯರೊಳಗೆ ಬಾಷಾನಿನ ಅರಸನಾದ ಓಗನೊಬ್ಬನೇ ಉಳಿದಿದ್ದನು. ಅವನ ಮಂಚ ಕಬ್ಬಿಣದ್ದು; ಅಮ್ಮೋನಿಯರ ರಬ್ಬಾ ಎಂಬ ಪಟ್ಟಣದಲ್ಲಿ ಅದನ್ನು ಈಗಲೂ ನೋಡಬಹುದು. ಪುರುಷನ ಕೈ ಅಳತೆಯ ಪ್ರಕಾರ ಅದರ ಉದ್ದ ಒಂಭತ್ತು ಮೊಳ, ಅಗಲ ನಾಲ್ಕು ಮೊಳ.)
Kannada BSI Bible 2016
ಮಹಾ ಶರೀರಗಳಲ್ಲಿ ಉಳಿದವರೊಳಗೆ ಬಾಷಾನಿನ ಅರಸ ನಾದ ಓಗನು ಮಾತ್ರ ಉಳಿದನು; ಅಗೋ, ಅವನ ಮಂಚವು ಕಬ್ಬಿಣದ ಮಂಚ; ಅದು ಅಮ್ಮೋನನ ಮಕ್ಕಳ ರಬ್ಬಾನಲ್ಲಿ ಉಂಟಲ್ಲವೋ? ಅದರ ಉದ್ದವು ಪುರುಷನ ಕೈಯಳತೆಯ ಪ್ರಕಾರ ಒಂಭತ್ತು ಮೊಳ, ಅಗಲವು ನಾಲ್ಕು ಮೊಳ ಇತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
(ರೆಫಾಯರೊಳಗೆ ಬಾಷಾನಿನ ಅರಸನಾದ ಓಗನೊಬ್ಬನೇ ಉಳಿದಿದ್ದನು. ಅವನ ಮಂಚ ಕಬ್ಬಿಣದು; ಅಮ್ಮೋನಿಯರ ರಬ್ಬಾ ಎಂಬ ಪಟ್ಟಣದಲ್ಲಿ ಅದನ್ನು ಈಗಲೂ ನೋಡಬಹುದು. ಪುರುಷನ ಕೈಯಳತೆಯ ಪ್ರಕಾರ ಅದರ ಉದ್ದ ಒಂಭತ್ತು ಮೊಳ; ಅಗಲ ನಾಲ್ಕು ಮೊಳ.)
Kannada Bible (KNCL) BSI 2016
(ರೆಫಾಯರೊಳಗೆ ಬಾಷಾನಿನ ಓಗನೊಬ್ಬನೇ ಉಳಿದಿದ್ದನು. ಅವನ ಮಂಚ ಕಬ್ಬಿಣದ್ದು; ಅಮ್ಮೋನಿಯರ ರಬ್ಬಾ ಎಂಬ ಪಟ್ಟಣದಲ್ಲಿ ಅದನ್ನು ಈಗಲೂ ನೋಡಬಹುದು. ಪುರುಷನ ಕೈಯಳತೆಯ ಪ್ರಕಾರ ಅದರ ಉದ್ದ ಒಂಭತ್ತು ಮೊಳ, ಅಗಲ ನಾಲ್ಕು ಮೊಳ.)
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ರೆಫಾಯರಲ್ಲಿ ಬಾಷಾನಿನ ಅರಸನಾದ ಓಗನು ಮಾತ್ರ ಉಳಿದಿದ್ದನು. ಅವನ ಮಂಚವು ಕಬ್ಬಿಣದ ಮಂಚ. ಅದು ಅಮ್ಮೋನಿಯರ ರಬ್ಬಾದಲ್ಲಿ ಈಗಲೂ ಉಂಟಲ್ಲವೋ? ಅದರ ಉದ್ದ ಪುರುಷನ ಕೈ ಅಳತೆಯ ಪ್ರಕಾರ ಒಂಬತ್ತು ಮೊಳ, ಅಗಲ ನಾಲ್ಕು ಮೊಳ ಇತ್ತು.