Deuteronomy 3:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಗಿಲ್ಯಾದಿನ ಇನ್ನೊಂದು ಅರ್ಧಪ್ರದೇಶ ಮತ್ತು ಇಡೀ ಬಾಷಾನ್ ದೇಶವನ್ನು ಮನಸ್ಸೆಯ ಅರ್ಧಕುಲದವರಿಗೆ ಹಂಚಿದೆನು.” (ಬಾಷಾನ್ ಓಗನ ಸಾಮ್ರಾಜ್ಯವಾಗಿತ್ತು. ಬಾಷಾನಿನ ಒಂದು ಭಾಗವನ್ನು ಅರ್ಗೋಬ್ ಎಂದು ಕರೆಯುತ್ತಾರೆ. ಅಲ್ಲದೆ ರೆಫಾಯರ ದೇಶವೆಂತಲೂ ಕರೆಯುತ್ತಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಗಿಲ್ಯಾದಿನ ಮಿಕ್ಕ ಭಾಗವನ್ನೂ ಓಗನ ರಾಜ್ಯವಾಗಿದ್ದ ಅರ್ಗೋಬ್ ಎನಿಸಿಕೊಳ್ಳುವ ಸಮಸ್ತ ಬಾಷಾನ್ ದೇಶವನ್ನೂ ಮನಸ್ಸೆ ಕುಲದ ಅರ್ಧ ಜನರಿಗೆ ಕೊಟ್ಟೆನು.
Kannada BSI Bible 2016
ಮಿಕ್ಕ ಗಿಲ್ಯಾದನ್ನೂ ಓಗನ ರಾಜ್ಯವಾದ ಎಲ್ಲಾ ಬಾಷಾನನ್ನೂ ಮನಸ್ಸೆಯ ಅರ್ಧ ಕುಲಕ್ಕೆ ಕೊಟ್ಟೆನು; ಅರ್ಗೋಬಿನ ಸಮಸ್ತ ಸೀಮೆಯನ್ನೂ ಮಹಾಶರೀರಗಳ ದೇಶವೆಂದು ಹೇಳ ಲ್ಪಟ್ಟ ಸಮಸ್ತ ಭಾಷಾನನ್ನು ಅವರಿಗೆ ಕೊಟ್ಟೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಗಿಲ್ಯಾದಿನ ವಿುಕ್ಕ ಭಾಗವನ್ನೂ ಓಗನ ರಾಜ್ಯವಾಗಿದ್ದ ಅರ್ಗೋಬ್ ಎನಿಸಿಕೊಳ್ಳುವ ಸಮಸ್ತ ಬಾಷಾನ್ ದೇಶವನ್ನೂ ಮನಸ್ಸೆ ಕುಲದ ಅರ್ಧ ಜನರಿಗೆ ಕೊಟ್ಟೆನು.
Kannada Bible (KNCL) BSI 2016
ಗಿಲ್ಯಾದಿನ ಮಿಕ್ಕ ಭಾಗವನ್ನೂ ಓಗನ ರಾಜ್ಯ ಆಗಿದ್ದ ಅರ್ಗೋಬ್ ಎನಿಸಿಕೊಳ್ಳುವ ಸಮಸ್ತ ಬಾಷಾನ್ ನಾಡನ್ನೂ ಮನಸ್ಸೆಕುಲದ ಅರ್ಧ ಜನರಿಗೆ ಕೊಟ್ಟೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮಿಕ್ಕ ಗಿಲ್ಯಾದನ್ನು ಓಗನ ರಾಜ್ಯವಾದ ಎಲ್ಲಾ ಬಾಷಾನನ್ನೂ ಮನಸ್ಸೆಯ ಅರ್ಧ ಗೋತ್ರಕ್ಕೆ ಕೊಟ್ಟೆನು. ಅರ್ಗೋಬ್ ಎನಿಸಿಕೊಳ್ಳುವ ಸಮಸ್ತ ಸೀಮೆಯನ್ನೂ, ರೆಫಾಯರ ದೇಶವೆಂದು ಎನಿಸಿಕೊಳ್ಳುವ ಸಮಸ್ತ ಬಾಷಾನನ್ನೂ ಅವರಿಗೆ ಕೊಟ್ಟೆನು.