Deuteronomy 3:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರ ಪಶ್ಚಿಮದ ಮೇರೆ ಜೋರ್ಡನ್ ಹೊಳೆಯಾಗಿದೆ; ಉತ್ತರದ ಮೇರೆ ಗಲಿಲಾಯ ಸಮುದ್ರವಾಗಿದೆ; ದಕ್ಷಿಣದ ಮೇರೆ ಮೃತ್ಯು ಸಮುದ್ರವಾಗಿದೆ. ಅದು ಪಿಸ್ಗಾ ಬೆಟ್ಟದ ಬುಡದಲ್ಲಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಲ್ಲದೆ ಆರಾಬಾ ಎಂಬ ತಗ್ಗನ್ನೂ ಅವರಿಗೆ ಕೊಟ್ಟೆನು; ಅದರಲ್ಲಿ ಕಿನ್ನೆರೆತ್ ಸಮುದ್ರದಿಂದ ಪಿಸ್ಗಾ ಬೆಟ್ಟದ ಪಶ್ಚಿಮದಲ್ಲಿರುವ ಅರಾಬದ ಸಮುದ್ರವೆನಿಸಿಕೊಳ್ಳುವ ಲವಣಸಮುದ್ರದ ವರೆಗೆ ಯೊರ್ದನ್ ನದಿಯು ಅವರ (ಪಶ್ಚಿಮದ ವರೆಗೆ) ಮೇರೆ.
Kannada BSI Bible 2016
ಬೈಲನ್ನೂ ಯೊರ್ದನನ್ನೂ ಅದರ ಸೀಮೆಯನ್ನೂ ಕಿನ್ನೆರೆತ್ ಮೊದಲುಗೊಂಡು ಪೂರ್ವದಲ್ಲಿರುವ ಅಷ್ಡೋದ್ ಪಿಸ್ಗಾದ ಕೆಳಗಿರುವ ಉಪ್ಪಿನಸಮುದ್ರವಾದ ಬೈಲು ಸಮುದ್ರದ ವರೆಗೆ ಕೊಟ್ಟೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಲ್ಲದೆ ಅರಾಬಾ ಎಂಬ ತಗ್ಗನ್ನೂ ಅವರಿಗೆ ಕೊಟ್ಟೆನು; ಅದರಲ್ಲಿ ಕಿನ್ನೆರೆತ್ ಸಮುದ್ರ ಮೊದಲುಗೊಂಡು ಪಿಸ್ಗಾ ಬೆಟ್ಟದ ಪಶ್ಚಿಮದಲ್ಲಿರುವ ಅರಾಬದ ಸಮುದ್ರವೆನಿಸಿಕೊಳ್ಳುವ ಲವಣ ಸಮುದ್ರದವರೆಗೆ ಯೊರ್ದನ್ ಹೊಳೆಯು ಅವರ [ಪಶ್ಚಿಮ] ಮೇರೆ.
Kannada Bible (KNCL) BSI 2016
ಪಶ್ಚಿಮದಲ್ಲಿ ಅವರ ಪ್ರದೇಶ ಜೋರ್ಡನ್ ನದಿಯವರೆಗೆ ಹರಡಿತ್ತು. ಉತ್ತರದಲ್ಲಿ ಕಿನ್ನೆರೆತ್ ಸರೋವರ ಮೊದಲ್ಗೊಂಡು ದಕ್ಷಿಣದಲ್ಲಿ ಲವಣ ಸಮುದ್ರದವರೆಗೆ ವಿಸ್ತರಿಸಿತ್ತು. ಅದು ಪೂರ್ವದಲ್ಲಿ ಪಿಸ್ಗಾ ಬೆಟ್ಟದ ಬುಡದವರೆಗೆ ವ್ಯಾಪಿಸಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಲ್ಲದೆ ಪಶ್ಚಿಮದಲ್ಲಿ ಅವರ ಪ್ರದೇಶ ಅರಾಬಾದ ಯೊರ್ದನ್ ನದಿಯವರೆಗೆ ಹರಡಿತ್ತು, ಅದರಲ್ಲಿ ಕಿನ್ನೆರೆತ್ ಮೊದಲ್ಗೊಂಡು ಪೂರ್ವದಲ್ಲಿರುವ ಪಿಸ್ಗಾದ ಕೆಳಗಿರುವ ಉಪ್ಪಿನ ಸಮುದ್ರವಾದ ಬಯಲು ಸಮುದ್ರದವರೆಗೆ ವ್ಯಾಪಿಸಿತ್ತು.