Deuteronomy 3:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ನಿಮಗೆ ಕೊಟ್ಟಿರುವ ಪಟ್ಟಣಗಳಲ್ಲಿ ನಿಮ್ಮ ಹೆಂಡತಿಯರೂ ಮಕ್ಕಳೂ ಪಶುಗಳೂ ವಾಸಿಸಬೇಕು; (ನಿಮಗೆ ಪಶುಗಳು ಹೆಚ್ಚಾಗಿವೆ ಎಂದು ನನಗೆ ಗೊತ್ತುಂಟು.)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮಗೆ ಬಹಳ ದನಕುರಿಗಳು ಉಂಟೆಂಬುದನ್ನು ನಾನು ಬಲ್ಲೆ. ನಿಮ್ಮ ದೇವರಾದ ಯೆಹೋವನು ಯೊರ್ದನ್ ನದಿಯ ಆಚೆ ನಿಮ್ಮ ಸಹೋದರರಿಗೆ ಕೊಡುವ ದೇಶವು ಅವರಿಗೆ ಸ್ವಾಧೀನವಾಗುವವರೆಗೆ ನಿಮ್ಮ ಹೆಂಡತಿ ಮಕ್ಕಳೂ, ದನಕುರಿಗಳೂ ನಾನು ನಿಮಗೆ ಕೊಟ್ಟಿರುವ ಪಟ್ಟಣಗಳಲ್ಲೇ ಇರಲಿ.
Kannada BSI Bible 2016
ನಿಮ್ಮ ಹೆಂಡತಿ ಯರೂ ಮಕ್ಕಳೂ ಪಶುಗಳೂ (ನಿಮಗೆ ಬಹಳ ಪಶುಗಳಿವೆ ಎಂದು ನನಗೆ ತಿಳಿದಿದೆ)
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮಗೆ ಬಹಳ ದನಕುರಿಗಳುಂಟೆಂಬದನ್ನು ನಾನು ಬಲ್ಲೆ. ನಿಮ್ಮ ದೇವರಾದ ಯೆಹೋವನು ಯೊರ್ದನ್ ಹೊಳೆಯ ಆಚೆ ನಿಮ್ಮ ಸಹೋದರರಿಗೆ ಕೊಡುವ ದೇಶವು ಅವರಿಗೆ ಸ್ವಾಧೀನವಾಗುವವರೆಗೆ ನಿಮ್ಮ ಹೆಂಡರುಮಕ್ಕಳೂ ದನಕುರಿಗಳೂ ನಾನು ನಿಮಗೆ ಕೊಟ್ಟಿರುವ ಪಟ್ಟಣಗಳಲ್ಲೇ ಇರಲಿ.
Kannada Bible (KNCL) BSI 2016
ನಿಮಗೆ ಬಹಳ ದನಕುರಿಗಳುಂಟೆಂಬುದನ್ನು ನಾನು ಬಲ್ಲೆ. ನಿಮ್ಮ ದೇವರಾದ ಸರ್ವೇಶ್ವರ ಜೋರ್ಡನ್ ನದಿಯ ಆಚೆ ನಿಮ್ಮ ಸಹೋದರರಿಗೆ ಕೊಡುವ ನಾಡು ಅವರಿಗೆ ಸ್ವಾಧೀನವಾಗುವವರೆಗೆ ನಿಮ್ಮ ಮಡದಿ ಮಕ್ಕಳೂ ದನಕುರಿಗಳೂ ನಾನು ನಿಮಗೆ ಕೊಟ್ಟಿರುವ ಪಟ್ಟಣಗಳಲ್ಲೇ ಇರಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮಗೆ ಬಹಳ ಪಶುಗಳಿವೆ ಎಂದು ನನಗೆ ಗೊತ್ತಿದೆ. ಆದರೆ ನಿಮ್ಮ ಹೆಂಡತಿಯರೂ ಮಕ್ಕಳೂ ಪಶುಗಳೂ ನಾನು ನಿಮಗೆ ಕೊಟ್ಟ ಪಟ್ಟಣಗಳಲ್ಲಿ ವಾಸವಾಗಿರಲಿ.