Deuteronomy 3:26 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಆದರೆ ನಿಮ್ಮ ಕಾರಣದಿಂದ ಯೆಹೋವನು ನನ್ನ ಮೇಲೆ ಕೋಪಗೊಂಡಿದ್ದನು. ಆತನು ನನಗೆ ಕಿವಿಗೊಡಲಿಲ್ಲ. ಆತನು ನನಗೆ ಹೇಳಿದ್ದೇನೆಂದರೆ: ‘ಅಷ್ಟೇ ಸಾಕು! ಇನ್ನು ಈ ವಿಷಯವನ್ನು ನೀನು ಎತ್ತಬಾರದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಯೆಹೋವನು ನಿಮ್ಮ ದೆಸೆಯಿಂದ ನನ್ನ ಮೇಲೆ ಕೋಪವುಳ್ಳವನಾಗಿ ನನ್ನ ಮನವಿಯನ್ನು ಕೇಳದೆ, “ಸಾಕು, ಇದರ ವಿಷಯದಲ್ಲಿ ಇನ್ನು ನನ್ನ ಸಂಗಡ ಮಾತನಾಡಬೇಡ; ನೀನು ಯೊರ್ದನ್ ನದಿಯನ್ನು ದಾಟಬಾರದು.
Kannada BSI Bible 2016
ಆದರೆ ಕರ್ತನು ನಿಮಗೋಸ್ಕರ ನನ್ನ ಮೇಲೆ ಕೋಪಗೊಂಡು ನನ್ನ ಮನವಿಯನ್ನು ಕೇಳಲಿಲ್ಲ; ಕರ್ತನು ನನಗೆ--ಇನ್ನು ಸಾಕು; ಈ ವಿಷಯ ದಲ್ಲಿ ನನ್ನ ಸಂಗಡ ಇನ್ನೂ ಮಾತನಾಡಬೇಡ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಯೆಹೋವನು ನಿಮ್ಮ ದೆಸೆಯಿಂದ ನನ್ನ ಮೇಲೆ ಕೋಪವುಳ್ಳವನಾಗಿ ನನ್ನ ಮನವಿಯನ್ನು ಕೇಳದೆ - ಸಾಕು; ಇದರ ವಿಷಯದಲ್ಲಿ ಇನ್ನು ನನ್ನ ಸಂಗಡ ಮಾತಾಡಬೇಡ; ನೀನು ಯೊರ್ದನ್ ಹೊಳೆಯನ್ನು ದಾಟಕೂಡದು.
Kannada Bible (KNCL) BSI 2016
ಆದರೆ ಸರ್ವೇಶ್ವರ ನಿಮ್ಮ ನಿಮಿತ್ತ ನನ್ನ ಮೇಲೆ ಕೋಪಗೊಂಡರು. ನನ್ನ ಮನವಿಯನ್ನು ಕೇಳದೆ, ‘ಸಾಕು; ಇದರ ಬಗ್ಗೆ ಇನ್ನು ನನ್ನ ಸಂಗಡ ಮಾತಾಡಬೇಡ; ನೀನು ಜೋರ್ಡನ್ ನದಿಯನ್ನು ದಾಟಕೂಡದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಯೆಹೋವ ದೇವರು ನಿಮ್ಮ ನಿಮಿತ್ತ ನನ್ನ ಮೇಲೆ ಕೋಪಮಾಡಿ, ನನ್ನ ಮನವಿಯನ್ನು ಕೇಳಲಿಲ್ಲ. ಯೆಹೋವ ದೇವರು ನನಗೆ, “ಇನ್ನು ಸಾಕು, ಈ ವಿಷಯದಲ್ಲಿ ನನ್ನ ಸಂಗಡ ಇನ್ನು ಮಾತನಾಡಬೇಡ.