Deuteronomy 31:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ನಾನು ಈಗ ನೂರಿಪ್ಪತ್ತು ವರ್ಷದವನಾಗಿದ್ದೇನೆ. ನನಗೆ ನಿಮ್ಮನ್ನು ಇನ್ನೂ ನಡೆಸಲು ಸಾಧ್ಯವಿಲ್ಲ. ಯೆಹೋವನು, ‘ನೀನು ಜೋರ್ಡನ್ ಹೊಳೆಯನ್ನು ದಾಟಕೂಡದು’ ಎಂದು ಹೇಳಿರುತ್ತಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಅವರಿಗೆ, “ನಾನು ಈಗ ನೂರಿಪ್ಪತ್ತು ವರ್ಷದವನಾಗಿದ್ದೇನೆ; ವಿಶೇಷವಾದ ಕಾರ್ಯಗಳನ್ನು ನಿರ್ವಹಿಸುವುದು ಇನ್ನು ನನ್ನಿಂದಾಗದು. ಯೆಹೋವನು ನನಗೆ, ‘ನೀನು ಈ ಯೊರ್ದನ್ ನದಿಯನ್ನು ದಾಟಬಾರದು’ ಎಂದು ಆಜ್ಞಾಪಿಸಿದ್ದಾನೆ.
Kannada BSI Bible 2016
ಅವನು ಅವರಿಗೆ--ನಾನು ಈಹೊತ್ತು ನೂರ ಇಪ್ಪತ್ತು ವರುಷದವನಾಗಿದ್ದೇನೆ; ನಾನು ಇನ್ನು ಹೊರಗೆ ಹೋಗುವದಕ್ಕೂ ಬರುವದಕ್ಕೂ ಶಕ್ತನಲ್ಲ; ಇದಲ್ಲದೆ ಕರ್ತನು ನನಗೆ--ನೀನು ಈ ಯೊರ್ದನನ್ನು ದಾಟುವದಿ ಲ್ಲವೆಂದು ಹೇಳಿದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಅವರಿಗೆ - ನಾನು ಈಗ ನೂರಿಪ್ಪತ್ತು ವರುಷದವನಾಗಿದ್ದೇನೆ; ವಿಶೇಷವಾದ ಕಾರ್ಯಗಳನ್ನು ನಿರ್ವಹಿಸುವದು ಇನ್ನು ನನ್ನಿಂದಾಗದು; ಯೆಹೋವನು ನನಗೆ - ನೀನು ಈ ಯೊರ್ದನ್ ಹೊಳೆಯನ್ನು ದಾಟಕೂಡದೆಂದು ಆಜ್ಞಾಪಿಸಿದ್ದಾನೆ.
Kannada Bible (KNCL) BSI 2016
“ನಾನು ಈಗ ನೂರಿಪ್ಪತ್ತು ವರ್ಷದವನಾಗಿದ್ದೇನೆ; ವಿಶೇಷವಾದ ಕಾರ್ಯಗಳನ್ನು ನಿರ್ವಹಿಸುವುದು ಇನ್ನು ನನ್ನಿಂದಾಗದು; ಸರ್ವೇಶ್ವರ ನನಗೆ, ‘ನೀನು ಈ ಜೋರ್ಡನ್ ನದಿಯನ್ನು ದಾಟಕೂಡದು’ ಎಂದು ಆಜ್ಞಾಪಿಸಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನಾನು ಈ ಹೊತ್ತು ನೂರ ಇಪ್ಪತ್ತು ವರ್ಷದವನಾಗಿದ್ದೇನೆ. ಇನ್ನು ಮುಂದೆ ನಿಮ್ಮನ್ನು ಮುನ್ನಡೆಸಲು ನನಗೆ ಸಾಧ್ಯವಾಗುತ್ತಿಲ್ಲ. ಇದಲ್ಲದೆ ಯೆಹೋವ ದೇವರು ನನಗೆ, ‘ನೀನು ಈ ಯೊರ್ದನನ್ನು ದಾಟುವುದಿಲ್ಲ,’ ಎಂದು ಹೇಳಿದ್ದಾರೆ.