Deuteronomy 31:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಮೇಲೆ ಮೋಶೆಯು ಯೆಹೋಶುವನನ್ನು ಕರೆದು ಎಲ್ಲಾ ಇಸ್ರೇಲರ ಎದುರಿನಲ್ಲಿ, “ಶಕ್ತಿಶಾಲಿಯಾಗಿದ್ದು ಧೈರ್ಯಗೊಂಡಿರು. ನೀನು ಈ ಜನರನ್ನು ಯೆಹೋವನು ನಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದಂಥ ದೇಶಕ್ಕೆ ನಡೆಸು. ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳಲು ಇಸ್ರೇಲರಿಗೆ ಸಹಾಯ ಮಾಡು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಮೋಶೆ ಯೆಹೋಶುವನನ್ನು ಕರೆದು ಇಸ್ರಾಯೇಲರ ಮುಂದೆ ಅವನಿಗೆ, “ಯೆಹೋವನು ಇವರ ಪೂರ್ವಿಕರಿಗೆ ಪ್ರಮಾಣಮಾಡಿಕೊಟ್ಟ ದೇಶಕ್ಕೆ ನೀನೇ ಇವರೊಡನೆ ಹೋಗಿ ಅದನ್ನು ಅವರಿಗೆ ಸ್ವಾಧೀನಪಡಿಸಬೇಕು. ಆದುದರಿಂದ ಶೂರನಾಗಿ ಧೈರ್ಯದಿಂದಿರು;
Kannada BSI Bible 2016
ಆಗ ಮೋಶೆಯು ಯೆಹೋಶುವನನ್ನು ಕರೆದು ಸಮಸ್ತ ಇಸ್ರಾಯೇಲಿನ ಮುಂದೆ ಅವನಿಗೆ--ಬಲ ವಾಗಿರು; ಧೈರ್ಯವಾಗಿರು; ಯಾಕಂದರೆ ನೀನು ಈ ಜನರ ಸಂಗಡ ಹೋಗಿ ಕರ್ತನು ಅವರ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣಮಾಡಿದ ದೇಶದಲ್ಲಿ ಸೇರ ಬೇಕು; ನೀನು ಅದನ್ನು ಅವರಿಗೆ ಸ್ವಾಸ್ತ್ಯವಾಗಿ ಕೊಡ ಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಮೋಶೆ ಯೆಹೋಶುವನನ್ನು ಕರೆದು ಇಸ್ರಾಯೇಲ್ಯರೆಲ್ಲರ ಮುಂದೆ ಅವನಿಗೆ - ಯೆಹೋವನು ಇವರ ಪಿತೃಗಳಿಗೆ ಪ್ರಮಾಣ ಮಾಡಿಕೊಟ್ಟ ದೇಶಕ್ಕೆ ನೀನೇ ಇವರೊಡನೆ ಹೋಗಿ ಅದನ್ನು ಅವರಿಗೆ ಸ್ವಾಧೀನಪಡಿಸಬೇಕು. ಆದದರಿಂದ ಶೂರನಾಗಿ ಧೈರ್ಯದಿಂದಿರು;
Kannada Bible (KNCL) BSI 2016
ಅನಂತರ ಮೋಶೆ ಯೆಹೋಶುವನನ್ನು ಕರೆದು ಇಸ್ರಯೇಲರೆಲ್ಲರ ಮುಂದೆ, “ಸರ್ವೇಶ್ವರ ಇವರ ಪಿತೃಗಳಿಗೆ ಪ್ರಮಾಣಮಾಡಿಕೊಟ್ಟ ನಾಡಿಗೆ ನೀನೇ ಇವರೊಡನೆ ಹೋಗಿ ಅದನ್ನು ಅವರಿಗೆ ಸ್ವಾಧೀನಪಡಿಸಬೇಕು. ಆದುದರಿಂದ ಶೂರನಾಗಿರು, ಧೈರ್ಯದಿಂದಿರು;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಮೋಶೆಯು ಯೆಹೋಶುವನನ್ನು ಕರೆದು, ಸಮಸ್ತ ಇಸ್ರಾಯೇಲಿನ ಮುಂದೆ ಅವನಿಗೆ, “ಶಕ್ತಿಶಾಲಿಯಾಗಿರು, ಧೈರ್ಯವಾಗಿರು. ಏಕೆಂದರೆ ನೀನು ಈ ಜನರ ಸಂಗಡ ಹೋಗಿ ಯೆಹೋವ ದೇವರು ಅವರ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ದೇಶದಲ್ಲಿ ಸೇರಿಸಬೇಕು. ನೀನು ಅವರಿಗೆ ಅದನ್ನು ಸೊತ್ತಾಗಿ ಹಂಚಿಕೊಡಬೇಕು.