Deuteronomy 31:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ನಿನ್ನನ್ನು ನಡೆಸುತ್ತಾನೆ, ಆತನು ತಾನೇ ನಿನ್ನೊಂದಿಗಿರುವನು. ಆತನು ನಿನ್ನ ಕೈಬಿಡುವುದಿಲ್ಲ, ನಿನ್ನನ್ನು ತೊರೆಯುವುದಿಲ್ಲ. ಆದ್ದರಿಂದ ಚಿಂತಿಸಬೇಡ, ಭಯಪಡಬೇಡ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ತಾನೇ ನಿನ್ನ ಮುಂದೆ ಹೋಗುವನು; ಆತನೇ ನಿನ್ನ ಸಂಗಡ ಇರುವನು; ನಿನ್ನನ್ನು ಅಪಜಯಕ್ಕೆ ಗುರಿಪಡಿಸುವುದೇ ಇಲ್ಲ, ಕೈಬಿಡುವುದಿಲ್ಲ; ಅಂಜಬೇಡ, ಧೈರ್ಯದಿಂದಿರು” ಎಂದು ಹೇಳಿದನು.
Kannada BSI Bible 2016
ಇದಲ್ಲದೆ ಕರ್ತನು ತಾನೇ ನಿನ್ನ ಮುಂದೆ ಹೋಗುತ್ತಾನೆ; ಆತನೇ ನಿನ್ನ ಸಂಗಡ ಇರುವನು; ನಿನ್ನನ್ನು ತೊರೆಯುವದಿಲ್ಲ, ವಿಸರ್ಜಿಸುವದಿಲ್ಲ; ನೀನು ಭಯಪಡಬೇಡ; ಅಂಜಿಕೊಳ್ಳಬೇಡ ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ತಾನೇ ನಿನ್ನ ಮುಂದುಗಡೆ ಹೋಗುವನು; ಆತನೇ ನಿನ್ನ ಸಂಗಡ ಇರುವನು; ನಿನ್ನನ್ನು ಅಪಜಯಕ್ಕೆ ಗುರಿಪಡಿಸುವದೇ ಇಲ್ಲ, ಕೈಬಿಡುವದಿಲ್ಲ; ಅಂಜಬೇಡ, ಧೈರ್ಯದಿಂದಿರು ಎಂದು ಹೇಳಿದನು.
Kannada Bible (KNCL) BSI 2016
ಸರ್ವೇಶ್ವರ ತಾವೇ ನಿನ್ನ ಮುಂದುಗಡೆ ಹೋಗುವರು; ಅವರೇ ನಿನ್ನ ಸಂಗಡ ಇರುವರು; ನಿನ್ನನ್ನು ಅಪಜಯಕ್ಕೆ ಗುರಿಪಡಿಸುವುದೇ ಇಲ್ಲ, ಕೈಬಿಡುವುದಿಲ್ಲ. ಅಂಜಬೇಡ; ಧೈರ್ಯದಿಂದಿರು,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ತಾವೇ ನಿನ್ನ ಮುಂದೆ ಹೋಗುತ್ತಾರೆ. ಅವರು ನಿನ್ನ ಸಂಗಡ ಇರುವರು, ಅವರು ನಿನ್ನನ್ನು ತೊರೆಯುವುದಿಲ್ಲ, ಮರೆತುಬಿಡುವುದಿಲ್ಲ. ನೀನು ಭಯಪಡಬೇಡ, ಅಂಜಿಕೊಳ್ಳಬೇಡ,” ಎಂದು ಹೇಳಿದನು.