Deuteronomy 32:41 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಥಳಥಳಿಸುವ ನನ್ನ ಖಡ್ಗವನ್ನು ನಾನು ಹದಮಾಡುವೆನು. ನನ್ನ ವೈರಿಗಳನ್ನು ಶಿಕ್ಷಿಸಲು ನಾನದನ್ನು ಉಪಯೋಗಿಸುವೆನು. ನಾನು ಅವರಿಗೆ ಯೋಗ್ಯವಾದ ದಂಡನೆಯನ್ನು ಕೊಡುವೆನು ಎಂದು ನಾನು ಆಣೆಯಿಟ್ಟು ಹೇಳುತ್ತೇನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
‘ಥಳಥಳಿಸುವ ನನ್ನ ಕತ್ತಿಯನ್ನು ನಾನು ಹದಮಾಡಿ, ನಾನು ಕೈ ಚಾಚಿ ನ್ಯಾಯವನ್ನು ಸ್ಥಾಪಿಸುವುದಕ್ಕೆ ಮುನ್ನುಗ್ಗಿ ನನ್ನ ಶತ್ರುಗಳಿಗೆ ಮುಯ್ಯಿತೀರಿಸುವೆನು, ನನ್ನನ್ನು ದ್ವೇಷಿಸಿದವರಿಗೆ ಪ್ರತಿದಂಡನೆ ಮಾಡುವೆನು;
Kannada BSI Bible 2016
ನಾನು ಮಿಂಚುವ ಕತ್ತಿಯನ್ನು ಹದಮಾಡುವಾಗ, ನನ್ನ ಕೈ ನ್ಯಾಯವನ್ನು ಹಿಡುಕೊಳ್ಳುವಾಗ, ನನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ ನನ್ನನ್ನು ಹಗೆಮಾಡುವವರಿಗೆ ಮುಯ್ಯಿ ತೀರಿಸುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಥಳಥಳಿಸುವ ನನ್ನ ಕತ್ತಿಯನ್ನು ನಾನು ಹದಮಾಡಿ ನ್ಯಾಯವನ್ನು ಸ್ಥಾಪಿಸುವದಕ್ಕೆ ಮುಂಗೊಂಡಾಗ ನನ್ನ ಶತ್ರುಗಳಿಗೆ ಮುಯ್ಯಿತೀರಿಸುವೆನು, ನನ್ನನ್ನು ದ್ವೇಷಿಸಿದವರಿಗೆ ಪ್ರತಿದಂಡನೆ ಮಾಡುವೆನು;
Kannada Bible (KNCL) BSI 2016
ಥಳಥಳಿಸುವ ಕತ್ತಿಯನು ಹದಮಾಡಿ ನ್ಯಾಯಸ್ಥಾಪಿಸುವೆನು ಮುನ್ನುಗ್ಗಿ. ಮುಯ್ಯಿ ತೀರಿಸುವೆನು ನನ್ನ ಶತ್ರುಗಳಿಗೆ ಪ್ರತಿದಂಡಿಸುವೆನು ನನ್ನ ದ್ವೇಷಿಸಿದವಗೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಮಿಂಚುವ ಖಡ್ಗವನ್ನು ಹದಮಾಡಿ, ನನ್ನ ಕೈ ನ್ಯಾಯವನ್ನು ಹಿಡಿದುಕೊಳ್ಳುವಾಗ, ನನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ನನ್ನನ್ನು ದ್ವೇಷಿಸುವವರಿಗೆ ಮುಯ್ಯಿತೀರಿಸುವೆನು.