Deuteronomy 33:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮೋಶೆಯು ನಫ್ತಾಲಿಯ ವಿಷಯವಾಗಿ ಹೇಳಿದ ಮಾತುಗಳು: “ನಫ್ತಾಲಿಯೇ, ನಿನಗೆ ಉತ್ತಮವಾದ ವಸ್ತುಗಳು ಅಧಿಕವಾಗಿ ದೊರೆಯುತ್ತವೆ. ಯೆಹೋವನು ನಿನ್ನನ್ನು ನಿಜವಾಗಿಯೂ ಆಶೀರ್ವದಿಸುವನು. ಗಲಿಲಾಯದ ಬಳಿಯಲ್ಲಿರುವ ಪ್ರಾಂತ್ಯವು ನಿನಗೆ ದೊರಕುವದು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಫ್ತಾಲಿ ಕುಲದ ವಿಷಯದಲ್ಲಿ, “ನಫ್ತಾಲಿ ಕುಲವೇ, ನೀನು ಯೆಹೋವನ ದಯೆಯನ್ನು ಹೊಂದಿ ಸಂತೃಪ್ತನಾದೆ; ಆತನ ಆಶೀರ್ವಾದದಿಂದ ನಿನಗೆ ಸಮೃದ್ಧಿಯುಂಟು. (ಕಿನ್ನೆರೆತ್) ಸಮುದ್ರವೂ ದಕ್ಷಿಣಪ್ರದೇಶವೂ ನಿನಗೆ ಸ್ವಾಸ್ತ್ಯವಾಗಲಿ” ಎಂದು ಹೇಳಿದನು.
Kannada BSI Bible 2016
ಅವನು ನಫ್ತಾಲಿಯ ವಿಷಯವಾಗಿ--ಓ ನಫ್ತಾಲಿಯೇ, ಅನುಗ್ರಹದಿಂದ ತೃಪ್ತನೇ, ಕರ್ತನ ಆಶೀರ್ವಾದದಿಂದ ತುಂಬಿದವನೇ, ಪಶ್ಚಿಮವನ್ನೂ ದಕ್ಷಿಣವನ್ನೂ ಸ್ವಾಧೀನಮಾಡಿಕೋ ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಫ್ತಾಲಿಕುಲದ ವಿಷಯದಲ್ಲಿ ಹೀಗಂದನು - ನಫ್ತಾಲಿಕುಲವೇ, ನೀನು ಯೆಹೋವನ ದಯೆಯನ್ನು ಹೊಂದಿ ಸಂತೃಪ್ತವಾದಿ; ಆತನ ಆಶೀರ್ವಾದದಿಂದ ನಿನಗೆ ಸಮೃದ್ಧಿಯುಂಟು. [ಕಿನ್ನೆರೆತ್] ಸಮುದ್ರವೂ ದಕ್ಷಿಣ ಪ್ರದೇಶವೂ ನಿನಗೆ ಸ್ವಾಸ್ತ್ಯವಾಗಲಿ.
Kannada Bible (KNCL) BSI 2016
ನಫ್ತಾಲಿ ಕುಲ ಕುರಿತು ಮೋಶೆ ನುಡಿದದ್ದು: “ಎಲೈ ನಫ್ತಾಲಿ, ಸರ್ವೇಶ್ವರನ ದಯೆಹೊಂದಿ ನೀ ತೃಪ್ತನಾದೆ ಆತನ ಆಶೀರ್ವಾದದಿಂದ ಸಮೃದ್ಧಿಯುಂಟು ನಿನಗೆ ಸಮುದ್ರದ ದಕ್ಷಿಣಪ್ರದೇಶ ಸೊತ್ತಾಗಲಿ ನಿನಗೆ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೋಶೆಯು ನಫ್ತಾಲಿಯ ವಿಷಯವಾಗಿ ಹೇಳಿದ್ದೇನೆಂದರೆ: “ನಫ್ತಾಲಿಯೇ, ಯೆಹೋವ ದೇವರ ಅನುಗ್ರಹದಿಂದ ತೃಪ್ತನಾದವನೇ, ದೇವರ ಆಶೀರ್ವಾದದಿಂದ ತುಂಬಿದವನೇ; ಸಮುದ್ರವೂ ದಕ್ಷಿಣ ಪ್ರದೇಶವೂ ನಿನಗೆ ಸೊತ್ತಾಗಲಿ.”