Deuteronomy 33:24 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಶೇರನ ವಿಷಯವಾಗಿ ಮೋಶೆಯ ಮಾತುಗಳು: “ಮಕ್ಕಳಲ್ಲಿ, ಆಶೇರನೇ ಹೆಚ್ಚಾಗಿ ಆಶೀರ್ವದಿಸಲ್ಪಟ್ಟವನು. ಅವನ ಅಣ್ಣತಮ್ಮಂದಿರೊಳಗೆ ಅವನೇ ಅಚ್ಚುಮೆಚ್ಚಿನವನಾಗಲಿ. ಎಣ್ಣೆಯಲ್ಲಿ ಅವನು ತನ್ನ ಕಾಲುಗಳನ್ನು ತೊಳೆಯಲಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಶೇರ್ ಕುಲದ ವಿಷಯದಲ್ಲಿ, “ಪುತ್ರಶ್ರೇಷ್ಠರಾದ ಆಶೇರ್ಯರು ಭಾಗ್ಯವನ್ನು ಹೊಂದಲಿ; ಅವರು ಸಹೋದರರ ದಯೆಯನ್ನು ಪಡೆಯಲಿ; ಅವರು ಎಣ್ಣೆಯಲ್ಲೇ ಕಾಲನ್ನು ಅದ್ದಲಿ.
Kannada BSI Bible 2016
ಅವನು ಆಶೇರನ ವಿಷಯವಾಗಿ--ಆಶೇರನು ಮಕ್ಕಳ ಆಶೀರ್ವಾದವನ್ನು ಹೊಂದಲಿ. ತನ್ನ ಸಹೋದ ರರ ಅಂಗೀಕಾರವನ್ನು ಹೊಂದಲಿ. ಅವನ ಕಾಲು ಎಣ್ಣೆಯಲ್ಲಿ ಅದ್ದಿರಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಶೇರ್ ಕುಲದ ವಿಷಯದಲ್ಲಿ ಹೀಗಂದನು - ಪುತ್ರಶ್ರೇಷ್ಠರಾದ ಆಶೇರ್ಯರು ಭಾಗ್ಯವನ್ನು ಹೊಂದಲಿ; ಅವರು ಸಹೋದರರ ದಯೆಯನ್ನು ಪಡೆಯಲಿ; ಅವರು ಎಣ್ಣೆಯಲ್ಲೇ ಕಾಲನ್ನು ಅದ್ದಲಿ.
Kannada Bible (KNCL) BSI 2016
ಆಶೇರ್ ಕುಲ ಕುರಿತು ಮೋಶೆ ನುಡಿದದ್ದು: “ಕುಲೋತ್ತಮನಾದ ಆಶೇರನು ಭಾಗ್ಯಹೊಂದಲಿ ಎಲ್ಲದರಲಿ ಸೋದರರಲ್ಲಿ ಶ್ರೇಷ್ಠತೆಯನು ಪಡೆಯಲಿ ಎಣ್ಣೆಯಲಿ ಪಾದಸ್ನಾನ ಮಾಡುವಂತಾಗಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೋಶೆ ಆಶೇರನ ವಿಷಯವಾಗಿ ಹೇಳಿದ್ದೇನೆಂದರೆ: “ಪುತ್ರರಲ್ಲಿಯೇ ಶ್ರೇಷ್ಠನಾದ ಆಶೇರನು ಭಾಗ್ಯ ಹೊಂದಲಿ. ಅವನ ಸಹೋದರರು ಅವನನ್ನು ಮೆಚ್ಚಿಕೊಳ್ಳಲಿ, ಎಣ್ಣೆಯಲ್ಲಿ ಪಾದಸ್ನಾನ ಮಾಡುವಂತಾಗಲಿ.