Deuteronomy 33:26 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಯೆಶುರೂನೇ, ನಮ್ಮ ದೇವರ ಹಾಗೆ ಬೇರೆ ದೇವರುಗಳಿಲ್ಲ. ಆತನು ಮೋಡಗಳ ಮೇಲೆ ಮಹಿಮಾರೂಢನಾಗಿ ಸವಾರಿ ಮಾಡುತ್ತಾ ಆಕಾಶದಿಂದ ನಿನಗೆ ಸಹಾಯಕ್ಕೆ ಬರುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಶುರೂನೇ, ನಿಮ್ಮ ದೇವರಿಗೆ ಸಮಾನರು ಯಾರು ಇಲ್ಲ; ಆತನು ಆಕಾಶವನ್ನೇರಿ ಮೇಘಾರೂಢನಾಗಿ ಮಹಾಗಾಂಭೀರ್ಯದಿಂದ ನಿಮ್ಮ ಸಹಾಯಕ್ಕೆ ಬರುವನು.
Kannada BSI Bible 2016
ಯೆಶುರೂನನ ದೇವರ ಹಾಗೆ ಯಾರೂ ಇಲ್ಲ. ಆತನು ನಿನ್ನ ಸಹಾಯಕ್ಕೆ ಪರಲೋಕದಲ್ಲಿಯೂ ತನ್ನ ಘನತೆಯಲ್ಲಿಯೂ ಆಕಾಶದ ಮೇಲೆಯೂ ಬರುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಶುರೂನೇ, ನಿಮ್ಮ ದೇವರಿಗೆ ಸಮಾನನು ಯಾವನೂ ಇಲ್ಲ; ಆತನು ಆಕಾಶವನ್ನೇರಿ ಮೇಘಾರೂಢನಾಗಿ ಮಹಾಗಾಂಭೀರ್ಯದಿಂದ ನಿಮ್ಮ ಸಹಾಯಕ್ಕೆ ಬರುವನು.
Kannada Bible (KNCL) BSI 2016
ಇಸ್ರಯೇಲಿನ ಜನರೇ, ನಿಮ್ಮ ದೇವರಿಗೆ ಸಮಾನನಾರೂ ಇಲ್ಲ, ಆತ ಬರುವನು ಆಕಾಶವನ್ನೇರಿ, ಮೇಘಾರೂಢನಾಗಿ ಮಹಾಗಾಂಭೀರ್ಯದಿಂದ ಬರುವನು ನಿಮ್ಮ ನೆರವಿಗಾಗಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಯೆಶುರೂನನ ದೇವರ ಹಾಗೆ ಯಾರೂ ಇಲ್ಲ. ದೇವರು ನಿನ್ನ ಸಹಾಯಕ್ಕೆ ಆಕಾಶವನ್ನೇರಿ ಮೇಘಾರೂಢನಾಗಿ ತಮ್ಮ ಘನತೆಯಲ್ಲಿ ಬರುತ್ತಾರೆ.