Deuteronomy 34:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮೋಶೆಯು ನೆಬೋ ಬೆಟ್ಟವನ್ನು ಹತ್ತಿದನು. ಅವನು ಮೋವಾಬಿನ ಜೋರ್ಡನ್ ಕಣಿವೆಯಿಂದ ಪಿಸ್ಗಾ ಬೆಟ್ಟದ ಮೇಲಕ್ಕೆ ಬಂದನು. ಇದು ಜೋರ್ಡನ್ ನದಿಯ ಆಚೆಕಡೆಯಲ್ಲಿರುವ ಜೆರಿಕೊ ಊರಿನ ಎದುರಿನಲ್ಲಿದೆ. ಯೆಹೋವನು ಮೋಶೆಗೆ ಗಿಲ್ಯಾದಿನಿಂದ ದಾನ್‌ವರೆಗಿದ್ದ ಎಲ್ಲಾ ಪ್ರದೇಶವನ್ನು ತೋರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೋಶೆಯು ಮೋವಾಬ್ಯರ ಮೈದಾನದಿಂದ ಯೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಪರ್ವತಕ್ಕೆ ಹೋಗಿ ಪಿಸ್ಗಾ ಎಂಬ ಬೆಟ್ಟದ ಶಿಖರವನ್ನು ಹತ್ತಿದನು. ಆಗ ಯೆಹೋವನು ಕಾನಾನ್ ದೇಶವನ್ನೆಲ್ಲಾ ಅಂದರೆ ದಾನ್ ಪಟ್ಟಣದ ವರೆಗೂ ಗಿಲ್ಯಾದ್ ಸೀಮೆ,
Kannada BSI Bible 2016
ಆಗ ಮೋಶೆ ಮೋವಾಬಿನ ಬೈಲಿನಿಂದ ನೆಬೋ ಪರ್ವತಕ್ಕೆ ಯೆರಿಕೋವಿಗೆ ಎದುರಾಗಿರುವ ಪಿಸ್ಗಾದ ಶಿಖರಕ್ಕೆ ಏರಿ ಹೋದನು. ಅಲ್ಲಿ ಕರ್ತನು ಅವನಿಗೆ ದೇಶವನ್ನೆಲ್ಲಾ ದಾನಿನ ವರೆಗಿರುವ ಗಿಲ್ಯಾದನ್ನೂ
Kannada BSI JV (ಕನ್ನಡ ಸತ್ಯವೇದವು J.V. (BSI))
ಮೋಶೆಯು ಮೋವಾಬ್ಯರ ಮೈದಾನದಿಂದ ಯೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಪರ್ವತಕ್ಕೆ ಹೋಗಿ ಪಿಸ್ಗಾ ಎಂಬ ಬೆಟ್ಟದ ಶಿಖರವನ್ನು ಹತ್ತಿದನು. ಆಗ ಯೆಹೋವನು [ಕಾನಾನ್] ದೇಶವನ್ನೆಲ್ಲಾ ಅಂದರೆ ದಾನ್ ಪಟ್ಟಣದವರೆಗೂ
Kannada Bible (KNCL) BSI 2016
ಮೋಶೆ ಮೋವಾಬ್ಯರ ಬಯಲು ನಾಡಿನಿಂದ ಜೆರಿಕೋ ಪಟ್ಟಣಕ್ಕೆ ಎದುರಾಗಿ ಇರುವ ನೆಬೋ ಪರ್ವತಕ್ಕೆ ಹೋಗಿ, ಪಿಸ್ಗಾ ಎಂಬ ಬೆಟ್ಟದ ಶಿಖರವನ್ನು ಹತ್ತಿದನು. ಆಗ ಸರ್ವೆಶ್ವರ ಕಾನಾನ್ ನಾಡೆಲ್ಲವನ್ನು ಅಂದರೆ, ದಾನ್ ಪಟ್ಟಣದವರೆಗಿದ್ದ ಗಿಲ್ಯಾದ್ ಪ್ರಾಂತ್ಯ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಮೋಶೆ ಮೋವಾಬಿನ ಬಯಲಿನಿಂದ ನೆಬೋ ಪರ್ವತಕ್ಕೆ ಯೆರಿಕೋವಿಗೆ ಎದುರಾಗಿರುವ ಪಿಸ್ಗಾದ ಶಿಖರಕ್ಕೆ ಏರಿಹೋದನು. ಅಲ್ಲಿ ಯೆಹೋವ ದೇವರು ಅವನಿಗೆ ದೇಶವನ್ನೆಲ್ಲಾ ದಾನಿನವರೆಗಿರುವ ಗಿಲ್ಯಾದನ್ನೂ