Deuteronomy 4:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ನೀವು ಬೆಟ್ಟದ ಸಮೀಪಕ್ಕೆ ಬಂದು ನಿಂತುಕೊಂಡಿರಿ. ಆ ಪರ್ವತವು ಬೆಂಕಿಯಿಂದ ಪ್ರಜ್ವಲಿಸಿ ಆಕಾಶದ ತನಕ ಮುಟ್ಟಿತ್ತು. ಆಗ ಕಾರ್ಮೋಡವೂ ಕತ್ತಲೆಯೂ ಆವರಿಸಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ದಿನದಲ್ಲಿ ನೀವು ಹತ್ತಿರ ಬಂದು ಬೆಟ್ಟದ ಬುಡದಲ್ಲಿ ನಿಂತುಕೊಂಡಿರಲು ಕತ್ತಲೂ, ಮೋಡವೂ, ಕಾರ್ಗತ್ತಲೂ ಕವಿದು ಆ ಬೆಟ್ಟವು ಆಕಾಶದ ತುದಿಯವರೆಗೂ ಬೆಂಕಿಯಿಂದ ಉರಿಯಿತು.
Kannada BSI Bible 2016
ಆಗ ನೀವು ಹತ್ತಿರ ಬಂದು ಬೆಟ್ಟದ ಕೆಳಗೆ ನಿಂತಿರಿ; ಆ ಬೆಟ್ಟವು ಕತ್ತಲೆಯಾ ಗಿದ್ದು ಮೇಘಗಳೂ ಗಾಢಾಂಧಕಾರವೂ ಉಂಟಾಗಿ ಆಕಾಶ ಮಧ್ಯದ ವರೆಗೆ ಬೆಂಕಿಯಿಂದ ಉರಿಯು ತ್ತಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ದಿನದಲ್ಲಿ ನೀವು ಹತ್ತಿರ ಬಂದು ಬೆಟ್ಟದ ಬುಡದಲ್ಲಿ ನಿಂತುಕೊಂಡಿರಲು ಮೊಬ್ಬೂ ಮೋಡವೂ ಕಾರ್ಗತ್ತಲೂ ಕವಿದು ಆ ಬೆಟ್ಟವು ಆಕಾಶದ ತುದಿಯವರೆಗೂ ಬೆಂಕಿಯಿಂದ ಉರಿದದ್ದೂ;
Kannada Bible (KNCL) BSI 2016
ಅಂದು ನೀವು ಹತ್ತಿರ ಬಂದು ಆ ಬೆಟ್ಟದ ಬುಡದಲ್ಲಿ ನಿಂತುಕೊಂಡಿರಿ. ಬೆಟ್ಟವು ಬೆಂಕಿಯಿಂದ ಪ್ರಜ್ವಲಿಸುತ್ತಿರಲು ಅಂತರಿಕ್ಷದವರೆಗೂ ಕರಿಮೋಡವೂ ಕಾರ್ಗತ್ತಲೂ ಆವರಿಸಿದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ನೀವು ಹತ್ತಿರ ಬಂದು ಬೆಟ್ಟದ ಕೆಳಗೆ ನಿಂತಿರಿ. ಆ ಬೆಟ್ಟವು ಕತ್ತಲೆಯಾಗಿದ್ದು, ಮೇಘಗಳೂ, ಗಾಢಾಂಧಕಾರವೂ ಉಂಟಾಗಿ ಆಕಾಶ ಮಧ್ಯದವರೆಗೆ ಬೆಂಕಿಯಿಂದ ಉರಿಯುತ್ತಿತ್ತು.