Deuteronomy 4:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಆ ದಿನ ಸೀನಾಯಿ ಬೆಟ್ಟದಲ್ಲಿ ಸ್ವರವನ್ನು ಮಾತ್ರ ಕೇಳಿದಿರಿ. ನೀವು ಯೆಹೋವನ ರೂಪವನ್ನು ನೋಡಲಿಲ್ಲ. ದೇವರಿಗೆ ಯಾವ ಆಕಾರವೂ ಇಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೋರೇಬಿನಲ್ಲಿ ಯೆಹೋವನು ಬೆಂಕಿಯ ಜ್ವಾಲೆಯೊಳಗಿಂದ ನಿಮ್ಮ ಸಂಗಡ ಮಾತನಾಡಿದಾಗ ನಿಮಗೆ ಯಾವ ಆಕಾರವೂ ಕಾಣಿಸಲಿಲ್ಲ. ಆದುದರಿಂದ ನೀವು ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು.
Kannada BSI Bible 2016
ಆದದರಿಂದ ನಿಮ್ಮ ವಿಷಯವಾಗಿ ಬಹಳ ಜಾಗ್ರತೆಯಾಗಿರ್ರಿ; ಕರ್ತನು ಹೋರೇಬಿನಲ್ಲಿ ಬೆಂಕಿ ಯೊಳಗಿಂದ ನಿಮ್ಮ ಸಂಗಡ ಮಾತನಾಡಿದ ದಿನದಲ್ಲಿ ನೀವು ಯಾವ ತರವಾದ ಆಕಾರವನ್ನೂ ನೋಡಲಿ ಲ್ಲವಲ್ಲಾ.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೋರೇಬಿನಲ್ಲಿ ಯೆಹೋವನು ಬೆಂಕಿಯ ಜ್ವಾಲೆಯೊಳಗಿಂದ ನಿಮ್ಮ ಸಂಗಡ ಮಾತಾಡಿದಾಗ ನಿಮಗೆ ಯಾವ ಆಕಾರವೂ ಕಾಣಿಸಲಿಲ್ಲವಷ್ಟೆ. ಆದದರಿಂದ ನೀವು ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು.
Kannada Bible (KNCL) BSI 2016
“ಹೋರೇಬಿನಲ್ಲಿ” ಸರ್ವೇಶ್ವರ ಅಗ್ನಿಜ್ವಾಲೆಯೊಳಗಿಂದ ನಿಮ್ಮ ಸಂಗಡ ಮಾತನಾಡಿದರು. ಆಗ ನಿಮಗೆ ಯಾವ ಆಕಾರವೂ ಕಾಣಿಸಲಿಲ್ಲ. ಆದುದರಿಂದ ಬಹಳ ಎಚ್ಚರಿಕೆಯಿಂದಿರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ನಿಮ್ಮ ವಿಷಯವಾಗಿ ಬಹಳ ಜಾಗ್ರತೆಯಾಗಿರಿ. ಯೆಹೋವ ದೇವರು ಹೋರೇಬಿನಲ್ಲಿ ಬೆಂಕಿಯೊಳಗಿಂದ ನಿಮ್ಮ ಸಂಗಡ ಮಾತನಾಡಿದ ದಿನದಲ್ಲಿ ನೀವು ಯಾವ ತರವಾದ ಆಕಾರವನ್ನೂ ನೋಡಲಿಲ್ಲವಲ್ಲ.